ಕೊರೊನಾ ಸೋಂಕು ಲಕ್ಷಾಂತರ ಮಂದಿ ಹೊಟ್ಟೆ ಮೇಲೆ ಹೊಡೆದಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೆಕ್ಸಿಕೋದಲ್ಲಿ ಜೂನ್‌ನಲ್ಲಿ 83,311 ಜನರು ಕೆಲಸ ಕಳೆದುಕೊಂಡಿದ್ದಾರೆ. ಮೆಕ್ಸಿಕನ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೆಕ್ಯುರಿಟಿ ಈ ಬಗ್ಗೆ ಮಾಹಿತಿ ನೀಡಿದೆ.
ಮೆಕ್ಸಿಕೊದ ಐಎಂಎಸ್ಎಸ್ ನಲ್ಲಿ ಸುಮಾರು 19.5 ಲಕ್ಷ ಜನರು ಆರು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಉದ್ಯೋಗಗಳಲ್ಲಿ ಶೇಕಡಾ 86.6 ರಷ್ಟು ಶಾಶ್ವತ ಮತ್ತು ಶೇಡಕಾ 13.4 ರಷ್ಟು ಉದ್ಯೋಗಗಳು ತಾತ್ಕಾಲಿಕ ಸೇವೆಯಾಗಿತ್ತೋ. ಕೊರೊನಾ ಸೋಂಕು ಎಲ್ಲ ದೇಶದಂತೆ ಮೆಕ್ಸಿಕೊದ ಉದ್ಯೋಗದ ಮೇಲೂ ಪರಿಣಾಮ ಬೀರಿದೆ.
ಈ ವರ್ಷ ಕೊರೊನಾ ರೋಗದಿಂದಾಗಿ ಮೆಕ್ಸಿಕೊದಲ್ಲಿ 1 ಮಿಲಿಯನ್ ಉದ್ಯೋಗ ಕಠಿತವಾಗಿದೆ. ಸರ್ಕಾರ ಹೊಸ ಉದ್ಯೋಗ ಸೃಷ್ಟಿಗೆ ಪ್ರಯತ್ನ ನಡೆಸುತ್ತಿದೆ.