ಎಷ್ಟೇ ಪಾಠ ಕಲಿಸಿದರೂ ಯಾಕೋ ಚೀನಾ ಬುದ್ದಿ ಕಲಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ತಮ್ಮ ಕ್ಯಾತೆ ತೆಗೆಯೋದಿಕ್ಕೆ ರೆಡಿ ಆದಂತೆ ಕಾಣುತ್ತಿದೆ. ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಬೇಕೆಂದು ಮಾತುಕತೆಯಾಗಿದ್ದರೂ ಚೀನಿ ಸೈನಿಕರು ಇನ್ನು ಗಡಿ ಸಮೀಪವೇ ಇದ್ದಾರೆ ಎನ್ನಲಾಗಿದೆ.
ಹೌದು, ಲಡಾಖ್‌ನ ಪೂರ್ವಭಾಗದ ಗಡಿ ಪ್ರದೇಶದ ಸಮೀಪ 40 ಸಾವಿರ ಚೀನಿ ಸೈನಿಕರು ಇದ್ದಾರೆ ಎಂದು ವರದಿಗಳಾಗಿವೆ. ಅಲ್ಲದೆ ಈ ಚೀನಿ ಸೈನಿಕರ ಬಳಿ ಏರ್ ಡಿಫೆನ್ಸ್ ಸಿಸ್ಟಂಗಳು, ದೂರ ಶ್ರೇಣಿಯ ಆರ್ಟಿಲರರಿ ಸೇರಿದಂತೆ ಹಲವು ಶಸ್ತ್ರಾಸ್ರಗಳು ಇವೆ ಎನ್ನಲಾಗಿದೆ.
ಈ ಚೀನಿ ಸೈನಿಕರು ಫಿಂಗರ್ 5 ಪ್ರದೇಶದ ವ್ಯಾಪ್ತಿಯಲ್ಲಿರುವ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್ ಏರಿಯಾದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡು ಇದ್ದಾರೆ ಎನ್ನಲಾಗುತ್ತಿದೆ. ನಾವು ಇಲ್ಲಿಂದ ಹೋದರೆ ಭಾರತೀಯರು ಅತಿಕ್ರಮಿಸುತ್ತಾರೆ ಎಂಬ ನೆಪವೊಡ್ಡಿ ಅಲ್ಲಿ ಇದ್ದಾರೆ ಎನ್ನಲಾಗುತ್ತಿದೆ.