ಪ್ರತಿ ದೇಶದ ಆದಾಯ ತೆರಿಗೆ ಪಾವತಿ ನಿಯಮಗಳು ಭಿನ್ನವಾಗಿದೆ. ಬೇರೆ ಬೇರೆ ದೇಶಗಳು ತಮ್ಮದೆ ತೆರಿಗೆ ನೀತಿ ಹೊಂದಿವೆ. ಅಮೆರಿಕಾದಲ್ಲಿ ಚಿತ್ರ-ವಿಚಿತ್ರ ತೆರಿಗೆ ಕಾನೂನಿದೆ.
ಕುಂಬಳಕಾಯಿ ಖರೀದಿಸಿದ್ರೆ ತೆರಿಗೆ ಪಾವತಿ ಮಾಡ್ಬೇಕು. ಅರೇ ಇದೇನು ವಿಚಿತ್ರ ಎನ್ನಬೇಡಿ. ನ್ಯೂಜೆರ್ಸಿಯಲ್ಲಿ ಈ ಕಾನೂನಿದೆ. ಅಲ್ಲಿ ಕುಂಬಳಕಾಯಿ ಖರೀದಿ ಮಾಡಿದ್ರೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಹಚ್ಚೆ ಈಗ ಫ್ಯಾಷನ್. ಬಹುತೇಕರು ಹಚ್ಚೆ ಹಾಕಿಸಿಕೊಳ್ತಾರೆ. ಅಮೆರಿಕಾದ ಅರ್ಕಾನ್ಸಾಸ್ನಲ್ಲಿ ಹಚ್ಚೆ ಹಾಕಿಸಿಕೊಳ್ಳಲು ತೆರಿಗೆ ಪಾವತಿ ಮಾಡಬೇಕು. ಶೇಕಡಾ 6ರಷ್ಟು ತೆರಿಗೆ ವಿಧಿಸಲಾಗುತ್ತದೆ.
ನಾವು ಶೌಚಾಲಯಕ್ಕೆ ಹೋದ್ರೆ ಮನಸ್ಸಿಗೆ ಬಂದಷ್ಟು ನೀರು ಖರ್ಚು ಮಾಡ್ತೆವೆ. ಆದ್ರೆ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಟಾಯ್ಲೆಟ್ ಫ್ಲಶ್ ಮಾಡಲು ಹಣ ನೀಡಬೇಕು. ಅಲ್ಲಿನ ಸರ್ಕಾರ ಪ್ರತಿ ತಿಂಗಳು 355 ರೂಪಾಯಿಯನ್ನು ಟಾಯ್ಲೆಟ್ ಫ್ಲಶ್ ಗಾಗಿ ವಸೂಲಿ ಮಾಡುತ್ತದೆ.
ಐಸ್ ಕ್ಯೂಬ್ ಖರೀದಿಗೆ ತೆರಿಗೆ ಪಾವತಿ ಮಾಡಬೇಕೆಂದ್ರೆ ನೀವು ನಂಬುತ್ತೀರಾ? ಅಮೆರಿಕಾದ ಅರಿಜೊನಾದಲ್ಲಿ ಐಸ್ ಕ್ಯೂಬ್ ಖರೀದಿ ಮಾಡುವ ಗ್ರಾಹಕರು ತೆರಿಗೆ ಪಾವತಿಸಬೇಕು.