ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿವೆ. ಕಳ್ಳತನ ಮಾಡಿದ್ರೆ ಕೈ ಕತ್ತರಿಸುವ ದೇಶವೂ ಇದೆ. ಅತ್ಯಾಚಾರಿಯನ್ನು ಎಲ್ಲರ ಮುಂದೆ ನೇಣಿಗೇರಿಸುವ ದೇಶವೂ ಇದೆ. ಅದೇ ರೀತಿ ಪ್ರಪಂಚದಾದ್ಯಂತ ಅನೇಕ ವಿಲಕ್ಷಣ ಕಾನೂನುಗಳಿವೆ. ಕೆಲ ಕಾನೂನುಗಳು ಅಚ್ಚರಿ ಹುಟ್ಟಿಸುತ್ತವೆ.
ಕಾರಿನಲ್ಲಿ ಇಂಧನ ಖಾಲಿಯಾದ್ರೆ ಪೆಟ್ರೋಲ್ ಬಂಕ್ ಗೆ ನಾವು ಹೋಗ್ತೇವೆ. ಇಂಧನ ಖಾಲಿಯಾಗಿದ್ದು ತಿಳಿಯದೆ ಮಧ್ಯ ದಾರಿಯಲ್ಲಿ ವಾಹನ ತಳ್ಳಿಕೊಂಡು ಪೆಟ್ರೋಲ್ ಬಂಕ್ ಗೆ ಹೋಗುವವರು ನಮ್ಮಲ್ಲಿದ್ದಾರೆ. ಆದ್ರೆ ಜರ್ಮನಿಯಲ್ಲಿ ಕಾರಿನ ಇಂಧನ ಸಂಪೂರ್ಣ ಖಾಲಿಯಾಗುವವರೆಗೂ ನೀವು ಸುಮ್ಮನಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಜರ್ಮನಿಯಲ್ಲಿ ವಾಹನ ಚಲಾಯಿಸುವುದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಕಾರಿನಲ್ಲಿನ ಇಂಧನ ದಾರಿ ಮಧ್ಯದಲ್ಲಿ ಖಾಲಿಯಾಗಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.
ಭಾರತದಲ್ಲಿ ಜನರು ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾರೆ. ಆದರೆ ಜರ್ಮನಿಯಲ್ಲಿ ಇದನ್ನು ಮಾಡುವುದು ಅಸಹ್ಯವೆಂದು ಪರಿಗಣಿಸಲಾಗುತ್ತದೆ.