ಕ್ರಿಕೆಟ್ ನಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಬಳಸುವುದನ್ನು ಐಸಿಸಿ ನಿಷೇಧಿಸಿದೆ. ಹಾಗಾಗಿ ಇಂಗ್ಲೆಂಡ್ ಆಟಗಾರರು ಹೊಸ ಉಪಾಯ ಮಾಡಿದ್ದಾರೆ. ಬೆನ್ನಿನ ಮೇಲಿರುವ ಬೆವರನ್ನು ಬಳಸ್ತಿದ್ದಾರೆಂದು ಹೇಳಲಾಗ್ತಿದೆ.
ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಇಂಗ್ಲೆಂಡ್ ಆಟಗಾರರು ಇದ್ರ ಪ್ರಯೋಗ ಮಾಡಿದ್ದಾರೆ. ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಐಸಿಸಿ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಿದೆ.
ಜಿಮ್ಮಿ ಆ್ಯಂಡರ್ಸನ್ ಮತ್ತು ಜೋಫ್ರಾ ಆರ್ಚರ್ ಈ ರೀತಿ ಮಾಡಿದ್ದಾರೆನ್ನಲಾಗ್ತಿದೆ. ಕೊರೊನಾ ಕಾರಣಕ್ಕೆ ಖಾಲಿಯಿದ್ದ ಮೈದಾನದಲ್ಲಿ ನಾಲ್ಕು ತಿಂಗಳ ನಂತರ ಆಟ ಶುರುವಾಗಿದೆ.