
ಕೊರೊನಾ ಸೋಂಕು ವಿಶ್ವದ ನಿದ್ರೆಗೆಡಿಸಿದೆ. ಮಹಾಮಾರಿ ಆರ್ಭಟಕ್ಕೆ ಅರ್ಜೆಂಟೀನಾ ಹಾಗೂ ಚಿಲಿ ನಲುಗಿ ಹೋಗಿದೆ. ಈ ದೇಶಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದೆ.
ಕಳೆದ 24 ಗಂಟೆಗಳಲ್ಲಿ ಅರ್ಜೆಂಟೀನಾದಲ್ಲಿ 3,624 ಹೊಸ ಪ್ರಕರಣ ವರದಿಯಾಗಿದೆ. ಸೋಂಕಿತರ ಸಂಖ್ಯೆ 1,14,783 ಕ್ಕೆ ತಲುಪಿದೆ. 24 ಗಂಟೆಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಅರ್ಜೆಂಟೀನಾದಲ್ಲಿ 2,112 ಆಗಿದೆ.
ಇನ್ನು ಚಿಲಿಯಲ್ಲಿ 3,23,698 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇಲ್ಲಿ 7290 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,475 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 24 ಗಂಟೆಯಲ್ಲಿ 104 ಮಂದಿ ಸಾವನ್ನಪ್ಪಿದ್ದಾರೆ.