ಸರ್ಕಾರಿ ಕೆಲಸವೇ ಆಗಿರಲಿ, ಖಾಸಗಿಯೇ ಇದ್ದಿರಲಿ…..ನೌಕರರು 60 ವರ್ಷವಾಗ್ತಿದ್ದಂತೆಯೇ ನಿವೃತ್ತಿ ಹೊಂದಿಬಿಡ್ತಾರೆ. ನಿವೃತ್ತಿ ಅವಧಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇದ್ದಿರುತ್ತೆ. ಆದರೆ ಯಾವ ದೇಶದಲ್ಲೂ ನಿವೃತ್ತಿ ವಯಸ್ಸು 100 ಆಗಿರೋಕೆ ಸಾಧ್ಯಾನೇ ಇಲ್ಲ.
ಅಂತದ್ರಲ್ಲಿ ಇಲ್ಲೊಬ್ಬ ಮ್ಯಾಕ್ಡೊನಾಲ್ಡ್ ವ್ಯಕ್ತಿ 100ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದು ಕೆಲಸದಿಂದ ನಿವೃತ್ತಿ ಪಡೆಯುವ ಪ್ಲಾನ್ ಸಧ್ಯಕ್ಕಿಲ್ಲ ಎಂದು ಹೇಳಿದ್ದಾರೆ.
ಇರ್ವಿನ್ನ ರುಥ್ ಶಸ್ಟರ್ ಎಂಬವರು ಮ್ಯಾಕ್ಡೊನಾಲ್ಡ್ನಲ್ಲಿ ವಾರದಲ್ಲಿ ಮೂರು ದಿನ ಕೆಲಸ ಮಾಡ್ತಾರೆ. ರೆಸ್ಟಾರೆಂಟ್ ಟೇಬಲ್ಗಳನ್ನ ಸ್ವಚ್ಛ ಮಾಡಿ ಗ್ರಾಹಕರನ್ನ ಸ್ವಾಗತಿಸೋದು ಇವರ ಕೆಲಸ. ಈಕೆ 73ನೇ ವಯಸ್ಸಿಗೆ ಮೆಕ್ಡೊನಾಲ್ಡ್ ಕಂಪನಿ ಸೇರಿದ್ದರಂತೆ.
ನೌಕರರಿಗೆ ಮಹತ್ವದ ಸುದ್ದಿ: ಏ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ
ಪತಿಯ ನಿಧನದ ಬಳಿಕ ಅಂದರೆ 50ನೇ ವಯಸ್ಸಿನಿಂದ ರುಥ್ ವೃತ್ತಿ ಜೀವನಕ್ಕೆ ಕಾಲಿಟ್ಟರು. ನನಗೆ ಎಲ್ಲಿಯವರೆಗೆ ಕೆಲಸ ಮಾಡಬೇಕು ಎನಿಸುತ್ತೋ ಅಲ್ಲಿಯವರೆಗೆ ನನ್ನ ಸೇವೆ ಮುಂದುವರಿಯುತ್ತೆ ಅಂತಾ ರೂಥ್.
100ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿರುವ ಈ ವೃದ್ಧೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂದು ಹೇಳಿದ್ದಾರೆ. ಇಂತಹ ಇಳಿ ವಯಸ್ಸಿನಲ್ಲೂ ಕೆಲಸ ಮಾಡುವ ಆಸಕ್ತಿ ಏಕೆ ಎಂದು ಕೇಳಿದ್ರೆ, ನನಗೆ ಸಂಬಳ ದೊರಕುತ್ತೆ. ಇದರಿಂದ ನನ್ನ ಖರ್ಚನ್ನ ನಾನೇ ನಿಭಾಯಿಸಬಲ್ಲೆ. ನನ್ನ ಬಳಿ ಸಿಕ್ಕಾಪಟ್ಟೆ ಹಣ ಇಲ್ಲ ಆದರೆ ನನಗೆ ಸಾಲುವಷ್ಟು ಇದೆ ಎಂದು ಹೇಳಿದ್ದಾರೆ.