ಇಲ್ಲಿದೆ ನೋಡಿ ವೈರಲ್ ಆಗಿರೋ ವಿಡಿಯೋ ಹಿಂದಿನ ಸತ್ಯಾಸತ್ಯತೆ..! 07-11-2020 3:23PM IST / No Comments / Posted In: Latest News, International ಅಮೆರಿಕದಲ್ಲಿ ನಡೆಯುತ್ತಿರುವ ಮತ ಎಣಿಕೆಯ ವಿವರದ ಕ್ಷಣಕ್ಷಣದ ಮಾಹಿತಿಯನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ಚಾನೆಲ್ಗಳು ನೀಡುತ್ತಿವೆ. ಅದೇ ರೀತಿ ಅಮೆರಿಕದ ಪ್ರಸಿದ್ಧ ಚಾನೆಲ್ ಸಿಎನ್ಎನ್ ಕೂಡ ಮತ ಎಣಿಕೆಯ ಮಾಹಿತಿಯನ್ನ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಸಿಎನ್ಎನ್ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಬ್ಲಿಟ್ಜರ್ ಪೆನ್ಸಿಲ್ವೇನಿಯಾದಲ್ಲಿ ನಡೆಯುತ್ತಿರುವ ಮತ ಎಣಿಕೆಯನ್ನ ನಿರೂಪಕರು ವಿವರಿಸುತ್ತಿರುವ ವೇಳೆ ಸ್ಕ್ರೀನ್ ಮೇಲೆ ಪೋರ್ನ್ ಹಬ್ ಎಂಬ ಟ್ಯಾಬ್ ಕಾಣಸಿಕೊಂಡಿದ್ದು ಕೂಡಲೇ ನಿರೂಪಕ ಅದನ್ನ ಸ್ಕ್ರೀನ್ನಿಂದ ತೆಗೆದಿದ್ದಾರೆ. ಆದರೆ ನಿರೂಪಕ ತೀವ್ರ ಮುಜುಗರಕ್ಕೊಳಗಾದ ರೀತಿಯಲ್ಲಿ ಕಂಡು ಬಂದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 4 ಮಿಲಿಯನ್ಗೂ ಅಧಿಕ ಮಂದಿ ಈ ವಿಡಿಯೋ ನೋಡೋದ್ರ ಜೊತೆಗೆ ಕಾಮೆಂಟ್, ಶೇರ್ ಕೂಡ ಮಾಡಿಬಿಟ್ಟಿದ್ದಾರೆ. ಆದರೆ ಜೂಲಿಯನ್ ರಾಪ್ಕೆ ಎಂಬ ಪತ್ರಕರ್ತ ಈ ವಿಡಿಯೋ ನಕಲಿ ಅಂತಾ ಹೇಳಿದ್ದಾರೆ. ನಿಜವಾದ ವಿಡಿಯೋ ಬೇರೆಯೇ ಎಂದು ಹೇಳಿರುವ ಈ ಪತ್ರಕರ್ತ ವಿಡಿಯೋವನ್ನ ಶೇರ್ ಕೂಡ ಮಾಡಿದ್ದಾರೆ. ಇದೀಗ ಎರಡೂ ರೀತಿಯ ವಿಡಿಯೋ ಹರಿದಾಡ್ತಾ ಇರೋದ್ರಿಂದ ನೆಟ್ಟಿಗರು ಗೊಂದಲಕ್ಕೆ ಒಳಗಾಗಿದ್ದಾರೆ. https://twitter.com/PatrickSikler/status/1324645655055400961 CNN did NOT "have Pornhub open".It's a fake. pic.twitter.com/JdFmo15i4a — Julian Röpcke🇺🇦 (@JulianRoepcke) November 6, 2020