ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿರುವ ನೆರೆರಾಷ್ಟ್ರ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಸಂಗತಿ ವಿಶ್ವಕ್ಕೆ ತಿಳಿದಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ತತ್ತರಿಸುತ್ತಿದ್ದು ಇಷ್ಟಾದರೂ ತನ್ನ ನರಿಬುದ್ಧಿ ಮಾತ್ರ ಬಿಡುತ್ತಿಲ್ಲ.
ಪಾಕಿಸ್ತಾನದ ಈ ಕುತಂತ್ರ ಬುದ್ಧಿಯನ್ನು ಅರಿತಿರುವ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಾವಲು ಸಮಿತಿ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ 2018 ರಿಂದಲೂ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿದ್ದು, ಹೀಗಾಗಿ ಇತರ ರಾಷ್ಟ್ರಗಳಿಂದ ಆರ್ಥಿಕ ನೆರವು ಪಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.
BIG NEWS: IPL ಹರಾಜಿಗೆ ಒಂದು ದಿನ ಮೊದಲು ಪಂಜಾಬ್ ತಂಡದ ಮಹತ್ವದ ನಿರ್ಧಾರ
ಇದೀಗ ಪಾಕಿಸ್ತಾನವನ್ನು ಮತ್ತಷ್ಟು ಕಾಲ ಬೂದು ಪಟ್ಟಿಯಲ್ಲೇ ಮುಂದುವರಿಸಲು ಫೈನಾನ್ಸಿಯಲ್ ಅಕ್ಷನ್ ಟಾಸ್ಕ್ ಫೋರ್ಸ್ ತೀರ್ಮಾನಿಸಿದೆ ಎನ್ನಲಾಗಿದ್ದು, ಇದರಿಂದ ಪಾಕಿಸ್ತಾನದ ಸಂಕಷ್ಟ ಮತ್ತಷ್ಟು ಕಾಲ ಮುಂದುವರಿಯಲಿದೆ. ಒಂದೊಮ್ಮೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿದರೆ ಸಂಕಷ್ಟ ತೀವ್ರವಾಗಿರಲಿದೆ ಎಂದು ಹೇಳಲಾಗುತ್ತಿದೆ.