ಡೇಟಾ ಭದ್ರತೆ, 130 ಕೋಟಿ ಭಾರತೀಯರ ರಕ್ಷಣೆ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಟಿಕ್ ಟಾಕ್, ಪಬ್ಜಿ, ಯುಸಿ ಬ್ರೌಸರ್, ವಿ ಚಾಟ್ ಸೇರಿದಂತೆ 224 ಅಪ್ಲಿಕೇಷನ್ ಮೇಲೆ ನಿಷೇಧ ಹೇರಿದೆ. ಈ ಎಲ್ಲ ಅಪ್ಲಿಕೇಷನ್ ಗಳು ಭಾರತದಲ್ಲಿ ಪ್ರಸಿದ್ಧಿಯಾಗಿದ್ದವು. ಈ ಅಪ್ಲಿಕೇಷನ್ ಕಂಪನಿಗಳು ವಾರ್ಷಿಕ 200 ಮಿಲಿಯನ್ ಡಾಲರ್ ಅಂದ್ರೆ 1,46,600 ಕೋಟಿ ರೂಪಾಯಿ ಗಳಿಸುತ್ತಿತ್ತು.
ಕೇವಲ ಪಬ್ಜಿ ಮೇಲೆ ನಿಷೇಧ ಹೇರಿರುವುದ್ರಿಂದ ಚೀನಾ ಕಂಪನಿಗೆ 100 ಮಿಲಿಯನ್ ಡಾಲರ್ ನಷ್ಟವಾಗಿದೆ. ಹಂತ ಹಂತವಾಗಿ ಸರ್ಕಾರ, ಚೀನಾ ಅಪ್ಲಿಕೇಷನ್ ಮೇಲೆ ನಿಷೇಧ ಹೇರಿದೆ. ಭಾರತೀಯ ಬಳಕೆದಾರರಿಂದಲೇ ಈ ಕಂಪನಿಗಳು 200 ಮಿಲಿಯನ್ ಡಾಲರ್ ಗಳಿಕೆ ಮಾಡ್ತಿದ್ದವಂತೆ.
ಪಬ್ಜಿ ದೇಶವಾರು ವಿಂಗಡನೆ ಮಾಡಿ ಗಳಿಕೆಯ ಮಾಹಿತಿ ನೀಡಲ್ಲ. ಆದ್ರೆ ಭಾರತವೊಂದರಿಂದಲೇ ಪಬ್ಜಿ 80ರಿಂದ 100 ಮಿಲಿಯನ್ ಡಾಲರ್ ಗಳಿಕೆ ಮಾಡ್ತಿದೆ ಎಂದು ಅಂದಾಜಿಸಲಾಗಿದೆ. ಕಂಪನಿ ಗಳಿಕೆ, ಸಕ್ರಿಯ ಬಳಕೆದಾರರ ಮೇಲೆ ಅವಲಂಬಿಸಿರುತ್ತದೆ. ಭಾರತದಲ್ಲಿ ಪಬ್ಜಿ ಗಳಿಕೆಯ ಶೇಕಡಾ 5ಕ್ಕಿಂತ ಕಡಿಮೆ ಪಾಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿತ್ತು.
ಅಪ್ಲಿಕೇಷನ್ ಡೌನ್ಲೋಡ್ ಹಾಗೂ ಸಕ್ರಿಯತೆಯಿಂದಾಗಿ ಕಂಪನಿಗಳು ಗಳಿಕೆ ಮಾಡುತ್ತವೆ. ಅಮೆರಿಕಾ, ಜಪಾನ್, ಚೀನಾ, ದಕ್ಷಿಣ ಕೊರಿಯಾಕ್ಕೆ ಹೋಲಿಸಿದ್ರೆ ಭಾರತದಲ್ಲಿ ಗೇಮಿಂಗ್ ನಿಂದ ಬರುವ ಗಳಿಕೆ ಕಡಿಮೆ. ಗೇಮಿಂಗ್ ಗಳಿಕೆ ವಿಷ್ಯದಲ್ಲಿ ಭಾರತ ಟಾಪ್ 10 ಪಟ್ಟಿಯಲ್ಲೂ ಸ್ಥಾನ ಪಡೆಯುವುದಿಲ್ಲ.