ಸೈಬರ್ ಭದ್ರತಾ ತಜ್ಞರು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಗೊಳಿಸಿದ್ದು, ಇನ್ಸ್ಟಾಗ್ರಾಮ್, ಟಿಕ್ ಟಾಕ್, ಯುಟ್ಯೂಬ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳ 23 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ಬಳಕೆದಾರರ ದೂರವಾಣಿ ಸಂಖ್ಯೆ, ಖಾತೆಯ ಹೆಸರು, ಇಮೇಲ್ ವಿಳಾಸ, ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳು ಸೋರಿಕೆಯಾಗಿದ್ದು, ಇವುಗಳು ಡಾರ್ಕ್ ವೆಬ್ ನಲ್ಲಿ ಲಭ್ಯವಿದೆ ಎಂದು ಸೈಬರ್ ಭದ್ರತಾ ತಜ್ಞರು ತಿಳಿಸಿದ್ದಾರೆ.
ಸ್ಪಾಮರ್ ಗಳು ಹಾಗೂ ಸೈಬರ್ ಅಪರಾಧಿಗಳು ಈ ಮಾಹಿತಿಗಳನ್ನು ಇಟ್ಟುಕೊಂಡು ಬಳಕೆದಾರರ ಖಾತೆಗೆ ಕನ್ನ ಹಾಕಬಹುದು ಅಥವಾ ಖಾಸಗಿ ಮಾಹಿತಿಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡಬಹುದು ಎಂದು ಎಚ್ಚರಿಸಲಾಗಿದೆ.