alex Certify ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೊರೊನಾ ಮಧ್ಯೆಯೂ ಪ್ರಚಾರ ನಡೆಸುತ್ತಿರುವ ಟ್ರಂಪ್ ಗೆ ಎರಡು ಔಷಧಿಗಳನ್ನು ನೀಡಲಾಗ್ತಿದೆ.

ಟ್ರಂಪ್ ಗೆ Remdesivir ಮತ್ತು REGN-COV2 ಔಷಧಿ ನೀಡಲಾಗ್ತಿದೆ. ಆರಂಭದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತ್ರ ಚೇತರಿಕೆ ಕಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.

REGN-COV2ವನ್ನು ಅಮೆರಿಕದ ಕಂಪನಿ ರೆಜೆನೆರಾನ್ ಸಿದ್ಧಪಡಿಸಿದೆ. ಇದು ಸಾರ್ವಜನಿಕರಿಗೆ ಲಭ್ಯವಿಲ್ಲ. ಆದರೆ ಪರೀಕ್ಷೆ ಬ್ರಿಟನ್‌ನಲ್ಲಿ ನಡೆಯುತ್ತಿದೆ. ಇದನ್ನು ಆಂಟಿಬಾಡಿ ಕಾಕ್ಟೈಲ್ ಎಂದೂ ಕರೆಯಲಾಗುತ್ತಿದೆ. ಇದನ್ನು ಇಲಿ ಮತ್ತು ಕೊರೊನಾದಿಂದ ಗುಣಮುಖರಾದ ರೋಗಿಯ ಪ್ರತಿಕಾಯಗಳನ್ನು ಬೆರೆಸಿ ತಯಾರಿಸಲಾಗಿದೆ. ಈ ಔಷಧಿ ಬಗ್ಗೆ ಪ್ರಸ್ತುತ ಸೀಮಿತ ಮಾಹಿತಿಯಿದೆ.

Remdesivir ಟ್ರಂಪ್‌ಗೆ ನೀಡ್ತಿರುವ ಎರಡನೇ ಔಷಧಿ. ಈ ಔಷಧಿ ಕೊರೊನಾ ಪ್ರಭಾವವನ್ನು ಕಡಿಮೆ ಮಾಡ್ತಿದೆ. ಆದ್ರೆ ಕೊರೊನಾದಿಂದ ಜನರ ಜೀವ ಉಳಿಸಲು ಈ ಮಾತ್ರೆ ಪ್ರಭಾವ ಬೀರಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...