ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರ ಫಲಿತಾಂಶಗಳು ಬರಲಾರಂಭಿಸಿವೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮತ್ತು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆಯಿದೆ. ಯಾರಿಗೆ ಅಧಿಕಾರವೆಂಬುದು ಸದ್ಯದಲ್ಲೇ ಹೊರಬರಲಿದೆ. ಅಮೆರಿಕಾ ಅಧ್ಯಕ್ಷರಿಗೆ ಭರ್ಜರಿ ಸಂಬಳ ಸಿಗುತ್ತದೆ. ಹಾಗೆಯೇ ಅನೇಕ ಭತ್ಯೆಗಳು. ವಿಶ್ವದ ಯಾವುದೇ ರಾಷ್ಟ್ರಪತಿಗೆ ಇಷ್ಟೊಂದು ಸೌಲಭ್ಯ ಸಿಗುವುದಿಲ್ಲ.
ಯುಎಸ್ ಅಧ್ಯಕ್ಷರ ವಾರ್ಷಿಕ ವೇತನ 400,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ 2.9 ಕೋಟಿ ರೂಪಾಯಿ. ಆದರೆ ಇದಲ್ಲದೆ, ಅವರು ವಿವಿಧ ರೀತಿಯ ಭತ್ಯೆ ಮತ್ತು ಸೌಲಭ್ಯಗಳನ್ನು ಪಡೆಯುತ್ತಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಶ್ವೇತಭವನದಲ್ಲಿ ವಾಸಿಸುತ್ತಾರೆ. ಅವರಿಗೆ ವೈಯಕ್ತಿಕ ವಿಮಾನ, ಹೆಲಿಕಾಪ್ಟರ್ ನೀಡಲಾಗುತ್ತದೆ. ಅಧಿಕಾರಾವಧಿಯ ನಂತರ ಅವರು ನಿವೃತ್ತಿ ಪಿಂಚಣಿಗೆ ಅರ್ಹರಾಗಿರುತ್ತಾರೆ. ಅಮೆರಿಕಾದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನ ಖರ್ಚುಗಳನ್ನು ಸರ್ಕಾರದ ಖಜಾನೆಯಿಂದ ಪಡೆಯುತ್ತಾರೆ.
ರಾಷ್ಟ್ರಪತಿಗೆ ವಾರ್ಷಿಕವಾಗಿ 50,000 ಡಾಲರ್ (40 ಲಕ್ಷ ರೂ.) ಖರ್ಚಿನ ಭತ್ಯೆ ಸಿಗುತ್ತದೆ. ಅವರು ಒಂದು ಲಕ್ಷ ಡಾಲರ್ ರೂಪಾಯಿ (80 ಲಕ್ಷ ರೂಪಾಯಿ) ಪ್ರಯಾಣ ಭತ್ಯೆ ಪಡೆಯುತ್ತಾರೆ. ಇದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಮನರಂಜನಾ ಭತ್ಯೆಯಾಗಿ ವಾರ್ಷಿಕವಾಗಿ 19000 ಡಾಲರ್ (14 ಲಕ್ಷ ರೂಪಾಯಿ) ಪಡೆಯುತ್ತಾರೆ. ಯು.ಎಸ್. ಅಧ್ಯಕ್ಷರ ವೇತನಕ್ಕೆ ತೆರಿಗೆ ವಿಧಿಸಲಾಗುತ್ತದೆ. ಆದರೆ ಅವರು ಪಡೆಯುವ ಭತ್ಯೆಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ.
ಶ್ವೇತಭವನವನ್ನು ಅಲಂಕರಿಸಲು 100,000 ಡಾಲರ್ ಭತ್ಯೆ ನೀಡಲಾಗುತ್ತದೆ. ಅಮೆರಿಕನ್ ಅಧ್ಯಕ್ಷರು ಸಾಮಾನ್ಯವಾಗಿ ರಜಾದಿನಗಳಿಗಾಗಿ ಮೇರಿಲ್ಯಾಂಡ್ ನ ಕ್ಯಾಂಪ್ ಡೇವಿಡ್ ಗೆ ಹೋಗುತ್ತಾರೆ. ಅಲ್ಲಿ ಅಧ್ಯಕ್ಷರಿಗಾಗಿ ಐಷಾರಾಮಿ ನಿವಾಸವಿದೆ. ಜಿಮ್, ಈಜುಕೊಳ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ.