ಅಮೆರಿಕಾದಲ್ಲಿ ತಯಾರಿಸಲಾಗ್ತಿರುವ ಕೊರೊನಾ ವೈರಸ್ ಲಸಿಕೆ ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಲಸಿಕೆ ತುಂಬಾ ದುಬಾರಿಯಾಗಿದೆ. ವರದಿಯ ಪ್ರಕಾರ, ಅಮೆರಿಕಾದ ಕಂಪನಿ ಮಾಡರ್ನಾ ತನ್ನ ಲಸಿಕೆಯ ಒಂದು ಕೋರ್ಸ್‌ಗೆ 3700 ರೂಪಾಯಿಯಿಂದ 4500 ರೂಪಾಯಿ ಬೆಲೆ ನಿಗಧಿಪಡಿಸುತ್ತಿದೆ.
ಮಾಡರ್ನಾ ಲಸಿಕೆಯ ಉದ್ದೇಶಿತ ಬೆಲೆ ಫಿಜರ್ ಮತ್ತು ಬಯೋಟೆಕ್‌ನ ಕೊರೊನಾ ಲಸಿಕೆಗಿಂತ ಸುಮಾರು 800 ರೂಪಾಯಿ ಹೆಚ್ಚು. ಕೊನೆಯ ಹಂತದ ಪ್ರಯೋಗಗಳಲ್ಲಿ ಲಸಿಕೆ ಪರಿಣಾಮಕಾರಿಯಾದ್ರೆ ಮಾತ್ರ ಲಸಿಕೆ ಜನರಿಗೆ ತಲುಪಲಿದೆ.
ಯುಎಸ್ ಮತ್ತು ಇತರ ಶ್ರೀಮಂತ ದೇಶಗಳಿಂದ ಲಸಿಕೆಗಾಗಿ 3700 ರಿಂದ 4500 ರೂಪಾಯಿ ವಸೂಲಿ ಮಾಡಲು ಮಾಡರ್ನಾ ಚಿಂತಿಸುತ್ತಿದೆ. ಲಸಿಕೆ ಪೂರೈಸಲು ಅಮೆರಿಕ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಆದಾಗ್ಯೂ, ಮಾಡರ್ನಾದ ಕೊರೊನಾ ಲಸಿಕೆಯ ಬೆಲೆ ಇನ್ನೂ ಅಂತಿಮಗೊಂಡಿಲ್ಲ.