ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಆಟಗಾರನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಆಟಗಾರ ಇಕ್ಬಾಲ್ ಸಿಂಗ್ ಮೇಲೆ ಪತ್ನಿ ಹಾಗೂ ತಾಯಿ ಹತ್ಯೆ ಆರೋಪವಿದೆ. 62 ವರ್ಷದ ಇಕ್ಬಾಲ್ 1983 ರಲ್ಲಿ ಕುವೈತ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಾಟ್ ಪುಟ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.
ಪೆನ್ಸಿಲ್ವೇನಿಯಾದಲ್ಲಿ ವಾಸಿಸುತ್ತಿರುವ ಇಕ್ಬಾಲ್ ತನ್ನ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಪೊಲೀಸರು ಇಕ್ಬಾಲ್ ಮನೆಗೆ ಹೋದಾಗ ಇಕ್ಬಾಲ್ ರಕ್ತಸಿಕ್ತರಾಗಿದ್ದರು. ಹೆಂಡತಿ ಹಾಗೂ ತಾಯಿ ಶವ ಮುಂದಿತ್ತು.
1983ರಲ್ಲಿ ಪ್ರಶಸ್ತಿ ಗೆದ್ದ ನಂತ್ರ ಇಕ್ಬಾಲ್ ಅಮೆರಿಕಾದಲ್ಲಿ ವಾಸವಾಗಿದ್ದರು. ಅವರು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಹತ್ಯೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಇಕ್ಬಾಲ್ ಪತ್ನಿ, ತಾಯಿ ಹತ್ಯೆ ಮಾಡಿದ ನಂತ್ರ ಮಗಳಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದನಂತೆ.