ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ.
ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಹಾಕೆಸ್ಸಿನ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದನ್ನು ತೆಲಂಗಾಣದ ವಾರಂಗಲ್ ನಿಂದ ಡೆಲವೇರ್ಗೆ ಕೊಂಡೊಯ್ಯಲಾಗಿದೆ ಎಂಬುದು ವಿಶೇಷ.
45 ಟನ್ ತೂಕವಿರುವ ಈ ವಿಗ್ರಹವನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಮೂರ್ತಿ ನಿರ್ಮಾಣ ಪೂರ್ಣಗೊಳ್ಳಲು ಒಂದು ವರ್ಷ ಬೇಕಾಗಿತ್ತು. ಕೊರೊನಾ ಕಾರಣದಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಳ್ಳದೆ ಪ್ರತಿಷ್ಠಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತ್ತು. ಯಂತ್ರ ಪ್ರತಿಷ್ಠೆ ಮತ್ತು ಪ್ರಾಣ ಪ್ರತಿಷ್ಠೆ ಮೂಲಕ ಅರ್ಚಕರು ನಿಗದಿತ ಪೂಜಾ ಕೈಂಕರ್ಯಗಳನ್ನು ಮಾಡಿ ಮುಗಿಸಿದ್ದಾರೆ.
ಅಮೆರಿಕಾದಲ್ಲಿರುವ ಹಿಂದೂ ದೇವರ ಎತ್ತರದ ಪ್ರತಿಮೆ ಇದೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.