ನೀವು ಇಲ್ಲಿಯವರೆಗೆ ಎಷ್ಟು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದೀರಾ..? ಎಂಬ ಪ್ರಶ್ನೆ ತೀರಾ ಖಾಸಗಿ ಎಂದೆನಿಸುತ್ತೆ. ಆದರೆ ಈ ವಿಚಾರವಾಗಿಯೂ ವಿದೇಶದಲ್ಲಿ ಸರ್ವೇಯೊಂದನ್ನ ನಡೆಸಲಾಗಿದ್ದು ಸರ್ವೇಯಲ್ಲಿ ಶಾಕಿಂಗ್ ಫಲಿತಾಂಶ ಬಯಲಾಗಿದೆ.
ಹೆಲ್ತ್ಕೇರ್ ಕಂಪನಿಯಾದ ಯುರೋಕ್ಲಿನಿಕ್ಸ್ ಬ್ರಿಟನ್ನಲ್ಲಿ ಸುಮಾರು 2000 ಮಂದಿಯ ಮೇಲೆ ಅಧ್ಯಯನ ನಡೆಸುವ ಮೂಲಕ ಈ ಸರ್ವೇ ನಡೆಸಿದೆ.
ಈ ಅಧ್ಯಯನದಲ್ಲಿ ಬಯಲಾದ ಮಾಹಿತಿಯ ಪ್ರಕಾರ 25 ಪ್ರತಿಶತ ಜನರು ತಮ್ಮ ಜೀವಿತಾವಧಿಯಲ್ಲಿ ಇಬ್ಬರಿಂದ ನಾಲ್ಕು ಮಂದಿಯೊಂದಿಗೆ ಲೈಂಗಿಕ ಸಂಪರ್ಕವನ್ನ ಹೊಂದಿರುತ್ತಾರೆ.
ಆಶ್ಚರ್ಯಕರ ಎಂಬಂತೆ ಕೇವಲ 14 ಪ್ರತಿಶತ ಜನರು ಮಾತ್ರ ತಮ್ಮ ಜೀವಿತಾವಧಿಯಲ್ಲಿ ಕೇವಲ ಒಬ್ಬ ವ್ಯಕ್ತಿಯೊಂದಿಗೆ ಮಾತ್ರ ಲೈಂಗಿಕ ಸಂಪರ್ಕ ಹೊಂದಿದವರಾಗಿದ್ದಾರೆ. ಇನ್ನುಳಿದಂತೆ 2 ಪ್ರತಿಶತದಷ್ಟು ಮಂದಿ ಮಾತ್ರ 91ಕ್ಕೂ ಅಧಿಕ ಜನರೊಂದಿಗೆ ಸೆಕ್ಸ್ ಮಾಡಿದ್ದಾರಂತೆ.
ಅಲ್ಲದೇ 4 ಪ್ರತಿಶತದಷ್ಟು ಜನರಿಗೆ ತಾವು ಎಷ್ಟು ಜನರೊಂದಿಗೆ ಸೆಕ್ಸ್ ಮಾಡಿದ್ದೇವೆ ಅನ್ನೋದ್ರ ಲೆಕ್ಕವೇ ಇಲ್ಲವಂತೆ. ಈ ಸರ್ವೇಯಲ್ಲಿ ನಿಮ್ಮ ಸ್ಥಾನ ಎಲ್ಲಿದೆ ಎಂದು ನೋಡಲು ಈ ಕೆಳಗಿನ ಪಟ್ಟಿಯನ್ನೊಮ್ಮೆ ಗಮನಿಸಿ
ಯಾರೊಂದಿಗೂ ಸೆಕ್ಸ್ ಮಾಡದವರು – 3 %
1 : 14%
2-4 : 25%
5- 9 : 22%
10- 15 : 13%
16-20 : 7%
21-30 : 4%
31-40 : 2%
41-50 : 1%
51-70 : 1%
71-90 : 1%
91 ಅಥವಾ ಅದಕ್ಕೂ ಹೆಚ್ಚು : 2%
ಎಷ್ಟು ಜನರೊಂದಿಗೆ ಸೆಕ್ಸ್ ಮಾಡಿದ್ದೇವೆ ಎಂಬ ವಿಚಾರ ತಿಳಿಯದವರು – 4%