ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. ಇದೊಂದು ಸಾಮಾನ್ಯ ನೆಗಡಿ, ಜ್ವರ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎನ್ನುತ್ತಿದ್ದರು. ಆನ್ಲೈನ್ ಆರ್ಟಿಕಲ್ ಒಂದನ್ನು ಓದಿ ಅವರು ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಬ್ರಿಯಾನ್ ಮತ್ತು ಎರಿನ್ ಗೆ ಜ್ವರ ಕಾಣಿಸಿಕೊಂಡಿತ್ತು. ಆದ್ರೆ ದಂಪತಿ ಇದನ್ನು ನಿರ್ಲಕ್ಷ್ಯಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಔಷಧಿ ಸೇವಿಸಲಿಲ್ಲ. ಬ್ರಿಯಾನ್ ಗೆ ಜ್ವರ ಕಡಿಮೆಯಾಗಿತ್ತು. ಎರಿನ್ ಗೆ ಜ್ವರ ಮುಂದುವರೆದು ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಹದಗೆಟ್ಟ ನಂತ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಂಟಿಲೇಟರ್ ನಲ್ಲಿದ್ದ ಎರಿನ್ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾಳೆ. ಮೊದಲೇ ನಿದ್ರಾಹೀನಾತೆ, ಅಸ್ತಮಾದಿಂದ ಬಳಲ್ತಿದ್ದ ಎರಿನ್ ಗೆ ಕೊರೊನಾ ಸಾವು ಬಂದಿದೆ. ಬ್ರಿಯಾನ್ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗಿದೆ. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಟ್ಯಾಕ್ಸಿ ಚಾಲನೆ ಮುಂದುವರೆಸಿದ್ದ ಬ್ರಿಯಾನ್ ಗೆ ಮೊದಲು ಕೊರೊನಾ ಕಾಣಿಸಿಕೊಂಡಿತ್ತು.