ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ.
2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಸಂಸ್ಥೆಯ ಮಹಾ ಸಭೆಯು ಡಿಸೆಂಬರ್ 11ರ ದಿನಾಂಕವನ್ನು ಯೋಗ ದಿನವೆಂದು ಆಚರಿಸಲು ನಿರ್ಧರಿಸಿತ್ತು. ಆದರೆ ಜೂನ್ 21ರಂದು ಸೂರ್ಯನು ಅತಿ ಹೆಚ್ಚು ಕಾಲ ಮುಳುಗದೇ ಇರುವ ಕಾರಣ, ಅಂದು ಅತ್ಯಂತ ಸುದೀರ್ಘವಾದ ದಿನವಾದ ಕಾರಣ ಈ ದಿನಾಂಕವನ್ನು ಆರಿಸಲಾಗಿದೆ.
ಇಂದು 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೆನಪಿಗಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಹ ರಾಜತಾಂತ್ರಿಕರು ದೆಹಲಿಯಲ್ಲಿ ನಡೆದ ಯೋಗಾಚರಣೆಯಲ್ಲಿ ಭಾಗವಹಿಸಿದರು. ವೀಡಿಯೊದಲ್ಲಿ, ಜೈಶಂಕರ್ ಇತರ ರಾಜತಾಂತ್ರಿಕರೊಂದಿಗೆ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿ ಆರಾಮವಾಗಿ ಆಸನವನ್ನು ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು.