ಸಾಧಾರಣವಾಗಿ ಯೋಗಾಭ್ಯಾಸದ ಅನೇಕ ಆಸನಗಳಿಗೆ ಪ್ರಾಣಿ-ಪಕ್ಷಿಗಳ ಹೆಸರುಗಳನ್ನೇ ಇಡಲಾಗಿದೆ.
ಕುಕ್ಕುಟಾಸನ, ಮಯೂರಾಸನ, ಭುಜಂಗಾಸನ, ಮಾರ್ಜಾಲಾಸನ, ಉಷ್ಟ್ರಾಸನ, ಅಧೋಮುಖ ಶ್ವಾನಾಸನ, ಮತ್ಸ್ಯಾಸನ, ಕೂರ್ಮಾಸನ ಹೀಗೆ ಬಹುತೇಕ ಆಸನಗಳು ಪ್ರಾಣಿ-ಪಕ್ಷಿಗಳ ದೇಹದ ಬಳುಕುವಿಕೆಗೆ ಹೋಲುವಂತಿದೆ. ಅದೇ ರೀತಿ ನಮ್ಮ ದೇಹವನ್ನೂ ಬಾಗಿಸುವುದರಿಂದ ಅವುಗಳ ಹೆಸರಿನಿಂದಲೇ ಆಸನಗಳನ್ನು ಗುರುತಿಸಲಾಗುತ್ತಿದೆ.
ಈ ಪ್ರಾಣಿಗಳೂ ಮನುಷ್ಯರಂತೆ ಉಳಿದ ಪ್ರಾಣಿಗಳ ಆಸನ ಮಾಡಲು ಶುರು ಮಾಡಿದರೆ ಹೇಗಿರುತ್ತದೆ ? ಮನೆಯಲ್ಲಿನ ಮುದ್ದಾದ ಪ್ರಾಣಿಗಳೇ ನಿಮ್ಮ ಯೋಗಾಭ್ಯಾಸದ ಸಂಗಾತಿಗಳಾದರೆ ಹೇಗಿರುತ್ತದೆ ? ಆಸನ ಮಾಡುವಾಗ ಮಕ್ಕಳಂತೆ ಮೈಮೇಲೆ ಹತ್ತಿ ಓಡಾಡಿದರೆ, ಕುಣಿದಾಡಿದರೆ ಹೇಗಿರುತ್ತದೆ ?
ಅಂತರಾಷ್ಟ್ರೀಯ ಯೋಗದಿನಾಚರಣೆಯಂದು ನಿಮ್ಮ ಪ್ರಶ್ನೆಗೆ ಉತ್ತರ ಈ ಹಳೆ ವಿಡಿಯೋಗಳಲ್ಲಿವೆ ನೋಡಿ.