alex Certify International Women’s Day; ಮಹಿಳೆಯರ ರಕ್ಷಣೆಗಾಗಿ ಐದು ಮೊಬೈಲ್ ಅಪ್ಲಿಕೇಶನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

International Women’s Day; ಮಹಿಳೆಯರ ರಕ್ಷಣೆಗಾಗಿ ಐದು ಮೊಬೈಲ್ ಅಪ್ಲಿಕೇಶನ್‌

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಕಾಲಘಟ್ಟದಲ್ಲಿ ಮಹಿಳೆ ತನಗಿರುವ ಎಲ್ಲಾ ಸಂಕಷ್ಟ, ಸವಾಲುಗಳನ್ನು ಎದುರಿಸಿ ತನ್ನದೇ ಗುರಿಯನ್ನು ತಲುಪಿದ್ದಾಳೆ, ಎತ್ತರದ ಶಿಖರ ಏರಿದ್ದಾಳೆ.

ಆದರೂ ಮಹಿಳಾ ಶೋಷಣೆ ಇನ್ನು ನಿಂತಿಲ್ಲ. ಬದಲಿಗೆ ದಿನೇ ದಿನೇ ಹೆಚ್ಚುತ್ತಿದೆ, ಅತ್ಯಾಚಾರ, ದೌರ್ಜನ್ಯ, ಕಿರುಕುಳ ನೀಡುವವರು ಹೆಚ್ಚಾಗುತ್ತಿದ್ದಾರೆ. ದಿನಬೆಳಗಾದರೆ ಇಂತಹ ಕೆಟ್ಟ ಸುದ್ದಿಗಳನ್ನ ಕೇಳುತ್ತಲೆ ಇರುತ್ತೇವೆ. ಹೀಗಾಗಿ ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ, ಮಹಿಳೆಯರ ರಕ್ಷಣೆಗೆಂದೇ ಹಲವಾರು ಮೊಬೈಲ್ ಅಪ್ಲಿಕೇಷನ್‌ ಗಳು ಲಭ್ಯವಿವೆ.

ರಕ್ಷಾ(Raksha)

ಈ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ ನಂತರ, ಕರೆ ಮಾಡುವ ವ್ಯವಸ್ಥೆಗೆ ತನ್ನನ್ನು ಬೈಂಡ್ ಮಾಡಿಕೊಳ್ಳುತ್ತದೆ.‌ ಸಂಕಟದ ಸಂದರ್ಭಗಳಲ್ಲಿ ಒಂದೇ ಒಂದು ಬಟನ್ ಒತ್ತಿದರೆ ನೀವು ಆಯ್ಕೆ ಮಾಡಿದ ಸಂಪರ್ಕಗಳಿಗೆ ಇದು ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಅಷ್ಟೇ ಅಲ್ಲಾ ನೀವು ಆಯ್ಕೆ ಮಾಡಿದ ಸಂಪರ್ಕಗಳು ನಿಮ್ಮ ಲೊಕೇಷನ್ ಅನ್ನು ಸಹ ನೋಡಬಹುದು. ಅಪ್ಲಿಕೇಶನ್ ಕಾರ್ಯನಿರ್ವಹಿಸದಿದ್ದರೂ ಸಹ, ಮೂರು ಸೆಕೆಂಡುಗಳ ಕಾಲ ವಾಲ್ಯೂಮ್ ಬಟನ್ ಒತ್ತುವ ಮೂಲಕ ಎಚ್ಚರಿಕೆಗಳನ್ನು ಕಳುಹಿಸಬಹುದು, ಹಾಗೇ ಮಾಡಲು ಇಂಟರ್ನೆಟ್ ಅಗತ್ಯವಿಲ್ಲ.

ಸೇಫ್ಟಿಪಿನ್(Safetipin)

ಈ ಅಪ್ಲಿಕೇಶನ್ ಸುರಕ್ಷಿತ ಸ್ಥಳ ತಪುಪಲು ಪರ್ಫೆಕ್ಟ್ ಆಯ್ಕೆ. ವಿಷಮ ಪರಿಸ್ಥಿತಿಗಳಲ್ಲಿಯೂ ಸರಿಯಾದ ದಾರಿ ತೋರಿಸುವ ಈ ಆ್ಯಪ್ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ತುರ್ತು ಸಂಪರ್ಕ ಸಂಖ್ಯೆಗಳು, GPS ಟ್ರ್ಯಾಕಿಂಗ್, ಸುರಕ್ಷಿತ ಸ್ಥಳಗಳಿಗೆ ನಿರ್ದೇಶನ ನೀಡುವ ಅಂಶಗಳು ಈ ಅಪ್ಲಿಕೇಶನ್ ಅನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಸೇಫ್ಟಿಪಿನ್ ಎಂದು ಏಕೆ ಕರೆಯಲಾಗಿದೆ ಎಂದರೆ ಅದು ನೀವು ಹೋಗಲು ಸುರಕ್ಷಿತ ಸ್ಥಳಗಳನ್ನು ಪಿನ್ ಮಾಡುತ್ತದೆ ಮತ್ತು ಅಸುರಕ್ಷಿತ ಸ್ಥಳಕ್ಕೆ ಹೋಗುವುದನ್ನು ತಡೆಯುತ್ತದೆ.

BIG NEWS: ‌ವಾಹನ ಚಾಲನಾ ಪರವಾನಿಗೆ ಸ್ವೀಕರಿಸುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ….!

ಸ್ಮಾರ್ಟ್ 24×7(Smart 24×7)

ಸ್ಮಾರ್ಟ್ 24×7 ಅಪ್ಲಿಕೇಶನ್ ಕಾಲ್ ಸೆಂಟರ್ ಬೆಂಬಲ, ಪ್ಯಾನಿಕ್ ಎಚ್ಚರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮತ್ತು ತುರ್ತು ಸಂಪರ್ಕಗಳೊಂದಿಗೆ ಸಂಪರ್ಕಿಸಲು ಒಂದು ಪ್ರೆಸ್ ಬಟನ್ ಅನ್ನು ಹೊಂದಿದೆ. ಇದು ಸ್ಮಾರ್ಟ್ ಅಪ್ಲಿಕೇಶನ್ ಆಗಿದ್ದು ಸಮಸ್ಯಾತ್ಮಕ ಸಂದರ್ಭಗಳಲ್ಲಿ ಚಿತ್ರಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ಪೊಲೀಸರಿಗೆ ವರ್ಗಾಯಿಸುವ ಆಯ್ಕೆ ಕೂಡ ಹೊಂದಿದೆ.

ಬೀ-ಸೇಫ್(b-Safe)

ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಬರುವ ಮತ್ತೊಂದು ಅಪ್ಲಿಕೇಶನ್ ಬೀಸೇಫ್. ತುರ್ತು ಸಂಪರ್ಕ, ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವುದು, ಚಿತ್ರಗಳು, ಆಡಿಯೋ ಮತ್ತು ನಿಮ್ಮ ಸುತ್ತಮುತ್ತಲಿನ ವೀಡಿಯೊಗಳನ್ನು ತೆಗೆದುಕೊಳ್ಳಲು ಮತ್ತು ವಿವಿಧ ತುರ್ತು ಸಂಪರ್ಕಗಳಿಗೆ ಎಚ್ಚರಿಕೆ ಕಳುಹಿಸಲು bSafe ಅನುಮತಿಸುತ್ತದೆ. ನಕಲಿ ಕರೆ ಆಯ್ಕೆಯನ್ನು ಸಹ ಹೊಂದಿರುವ ಬೀಸೇಪ್ ನೀವು ಕರೆಯಲ್ಲಿರುವಂತೆ ನಟಿಸಲು ಸಹಾಯ ಮಾಡುತ್ತದೆ. ಈ‌ ಮೂಲಕ ಸಂಭಾವ್ಯ ಹಾನಿಕಾರಕ ಪರಿಸ್ಥಿತಿಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.

ಚಿಲ್ಲಾ(Chilla)

ಇತರ ಅಪ್ಲಿಕೇಶನ್‌ಗಳಂತೆ, ಚಿಲ್ಲಾ ಕೂಡ ತುರ್ತು ಬಟನ್ ಅನ್ನು ಹೊಂದಿದೆ. ಆದರೂ, ಕೆಲವು ಪರಿಸ್ಥಿತಿಗಳಲ್ಲಿ ಆ ಬಟನ್ ಅನ್ನು ಒತ್ತಲು ಸಾಧ್ಯವಾಗದ ಪರಿಸ್ಥಿತಿ ಇರಬಹುದು. ಈ ವಿಚಾರದಲ್ಲಿ ಚಿಲ್ಲಾ ವಿಭಿನ್ನ ವೈಶಿಷ್ಟ್ಯ ಹೊಂದಿದ್ದು, ಸಂಕಷ್ಟದಲ್ಲಿರುವವರು ಜೋರಾಗಿ ಕೂಗಿಕೊಂಡಾಗ, ಈ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಸಕ್ರಿಯಗೊಂಡು, ತುರ್ತು ಸಂಪರ್ಕಗಳಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...