ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಎಲ್ಲ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದ್ರ ಜೊತೆ ಪ್ರಧಾನಿ ಮೋದಿ,ಮಹಿಳಾ ಸ್ವಯಂಸೇವಕ ಗುಂಪುಗಳು ನಡೆಸುವ ಸಂಸ್ಥೆಗಳಿಂದ ಅನೇಕ ವಸ್ತುಗಳನ್ನು ಖರೀದಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅದ್ರ ಲಿಂಕ್ ಗಳನ್ನು ಕೂಡ ಅವ್ರು ಹಂಚಿಕೊಂಡಿದ್ದಾರೆ.
ಈ ವಿಷ್ಯವನ್ನು ಮೋದಿ ಸ್ವತಃ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ನಾನು ಅಸ್ಸಾಂನ ಗಮುಸಾ ಧರಿಸಿರುವುದನ್ನು ನೀವು ಅನೇಕ ಬಾರಿ ನೋಡಿದ್ದೀರಿ. ಇದು ತುಂಬಾ ಆರಾಮದಾಯಕವಾಗಿದೆ. ಇಂದು, ಕಾಕತಿಪುಂಗ್ ಡೆವಲಪ್‌ಮೆಂಟ್ ಬ್ಲಾಕ್‌ನ ವಿವಿಧ ಸ್ವ-ಸಹಾಯ ಗುಂಪುಗಳು ತಯಾರಿಸಿದ ಗಮುಸಾವನ್ನು ನಾನು ಖರೀದಿಸಿದ್ದೇನೆಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಇನ್ನೂ ಅನೇಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಅದ್ರ ಮಾಹಿತಿಯನ್ನೂ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಬಂಗಾಳದ ಸೆಣಬಿನ ಫೈಲ್ ಫೋಲ್ಡರ್, ಗಮ್ಚಾ, ತಮಿಳುನಾಡಿನ ತೋಡಾ ಬುಡಕಟ್ಟು ಜನಾಂಗದವರು ತಯಾರಿಸಿದ ವಿಶೇಷ ಶಾಲುಗಳು, ನಾಗಾಲ್ಯಾಂಡ್‌ನ ಪ್ರಸಿದ್ಧ ಶಾಲುಗಳು, ಮಧುಬನಿ ವರ್ಣಚಿತ್ರವಿರುವ ಶಾಲುಗಳು ಸೇರಿವೆ.
2021 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಪವರ್ ಹ್ಯಾಶ್‌ಟ್ಯಾಗ್‌ನೊಂದಿಗೆ ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ. ಸಮಾಜದ ಪ್ರಗತಿಗಾಗಿ ಮಹಿಳೆಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.