alex Certify ಅಂತರಾಷ್ಟ್ರೀಯ ಚುಂಬನ ದಿನ: ಒಂದು ಮುತ್ತಿನಲ್ಲಿದೆ ಇಷ್ಟೆಲ್ಲಾ ಪ್ರಯೋಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರಾಷ್ಟ್ರೀಯ ಚುಂಬನ ದಿನ: ಒಂದು ಮುತ್ತಿನಲ್ಲಿದೆ ಇಷ್ಟೆಲ್ಲಾ ಪ್ರಯೋಜನ…!

ಅಂತರರಾಷ್ಟ್ರೀಯ ಚುಂಬನ ದಿನವನ್ನು ಪ್ರತಿ ವರ್ಷ ಜುಲೈ 6 ರಂದು ಆಚರಿಸಲಾಗುತ್ತದೆ. ಈ ದಿನವನ್ನು ದಂಪತಿಗಳಿಗೆ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಮೊದಲು ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಾರಂಭಿಸಲಾಯಿತು. ಕ್ರಮೇಣ ಜನರು ಅನೇಕ ದೇಶಗಳಲ್ಲಿ ಆಚರಿಸಲು ಪ್ರಾರಂಭಿಸಿದರು.

ಚುಂಬನ ದಿನಉದ್ದೇಶ

ಚುಂಬನ ದಿನವನ್ನು ಆಚರಿಸುವ ಉದ್ದೇಶ ಸಂಬಂಧವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು. ಇದು ಕೇವಲ ದಂಪತಿಗಳಿಗೆ ಸೀಮಿತವಾಗಿಲ್ಲ. ಪೋಷಕರು, ಒಡಹುಟ್ಟಿದವರು, ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಪ್ರೀತಿಯನ್ನು ಹಂಚಿಕೊಳ್ಳುವ ದಿನವೆಂದು ಇದನ್ನು ಪರಿಗಣಿಸಲಾಗಿದೆ. ಇದು ಪ್ರೀತಿಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಮತ್ತು ಬಲಪಡಿಸುತ್ತದೆ.

ಚುಂಬನದ ಪ್ರಯೋಜನಗಳು

ಚುಂಬನದಿಂದ ಹಲವಾರು ಪ್ರಯೋಜನಗಳಿವೆ. ಪರಸ್ಪರ  ಚುಂಬಿಸಿದಾಗ ದೇಹದಲ್ಲಿ ಅನೇಕ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಂಗಾತಿಯನ್ನು ತಬ್ಬಿಕೊಂಡು ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಿದರೆ ಅದು ಮಾನಸಿಕ ಪ್ರಕ್ರಿಯೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ರೋಗಗಳ ಅಪಾಯ ದೂರ

ಚುಂಬನದಿಂದ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ತಪ್ಪಿಸುತ್ತದೆ. ಚುಂಬನವು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ವ್ಯಕ್ತಿಯು ಒತ್ತಡದಿಂದ ಮುಕ್ತನಾಗಿರುತ್ತಾನೆ. ಇಷ್ಟೇ ಅಲ್ಲ  ಆಕ್ಸಿಟೋಸಿನ್ ಎಂಬ ರಾಸಾಯನಿಕ ಕೂಡ ಚುಂಬನದ ಬಳಿಕ ಬಿಡುಗಡೆಯಾಗುತ್ತದೆ.

ಆರೋಗ್ಯಕ್ಕೆ ಪ್ರಯೋಜನಕಾರಿ

ಮುತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಚುಂಬಿಸಿದಾಗ ಕಾಕ್ಟೈಲ್ ಬಿಡುಗಡೆಯಾಗುತ್ತದೆ, ಅದು ಮನಸ್ಸನ್ನು ಹಗುರಾಗಿಸುತ್ತದೆ. ಇದು ಡೋಪಮೈನ್ ಮತ್ತು ಸಿರೊಟೋನಿನ್ ನಂತಹ ರಾಸಾಯನಿಕಗಳನ್ನು ಹೊಂದಿರುತ್ತದೆ. ಇವು ನಮ್ಮ  ಭಾವನೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಒತ್ತಡ ನಿಯಂತ್ರಣ

ಆತಂಕ ಅಥವಾ ಒತ್ತಡದ ಸಮಸ್ಯೆ ಇದ್ದರೆ ಚುಂಬನದಲ್ಲಿ ಅದಕ್ಕೆ ಪರಿಹಾರವಿದೆ. ಚುಂಬನವು ಹೃದಯ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ಸಂಗಾತಿಯನ್ನು ಪ್ರತಿದಿನ ಚುಂಬಿಸಿದರೆ, ಅದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಉದ್ವೇಗದಿಂದ ದೂರವಿರಬಹುದು. ಚುಂಬನವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...