alex Certify ಭಾರತೀಯ ಸ್ಮಾರ್ಟ್‌ ಫೋನ್‌ ಬಳಕೆದಾರರ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸ್ಮಾರ್ಟ್‌ ಫೋನ್‌ ಬಳಕೆದಾರರ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ…!

ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಫೋನ್‌ನಲ್ಲಿ ಮಾತನಾಡುವುದು, ಮೆಸೇಜ್‌ ಕಳುಹಿಸುವುದು ಅಥವಾ ಇಂಟರ್ನೆಟ್‌ ಬಳಸುವುದು ಹೀಗೆ ಪ್ರತಿ ಕೆಲಸಕ್ಕೂ ಈಗ ಸ್ಮಾರ್ಟ್‌ಫೋನ್‌ ಬೇಕು. ಆದರೆ ನಾವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಫೋನ್‌ನಲ್ಲಿ ಕಳೆಯುತ್ತೇವೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಹೊಸ ವರದಿಯೊಂದು ಈ ಕುರಿತ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದೆ. ಭಾರತೀಯರು ಫೋನ್‌ನಲ್ಲಿ ಹೆಚ್ಚಾಗಿ ಏನನ್ನು ನೋಡ್ತಾರೆ ? ಸರಾಸರಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನೆಲ್ಲ ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿಯ ಪ್ರಕಾರ ಭಾರತೀಯ ಬಳಕೆದಾರರು ಸರಾಸರಿ ಒಂದು ದಿನದಲ್ಲಿ 3 ಗಂಟೆಗಳಿಗಿಂತಲೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಿದ್ದಾರೆ. ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ವ್ಯಯಿಸುತ್ತಿದ್ದಾರೆ. ಜನರು ಪ್ರತಿದಿನ 194 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಅದೇ ರೀತಿ OTTಯಲ್ಲಿ 44 ನಿಮಿಷಗಳು ಮತ್ತು ಆನ್‌ಲೈನ್ ಗೇಮಿಂಗ್ಗೆ 46 ನಿಮಿಷಗಳನ್ನು ಖರ್ಚು ಮಾಡ್ತಿದ್ದಾರೆ.

ಸರಾಸರಿ ಬಳಕೆದಾರರು ಆನ್‌ಲೈನ್ ಗೇಮಿಂಗ್‌ನಲ್ಲಿ ತಿಂಗಳಿಗೆ 100 ರೂಪಾಯಿಯಷ್ಟು ಹಣವನ್ನು ಖರ್ಚು ಮಾಡುತ್ತಿದ್ದು, ದಿನಕ್ಕೆ ಒಂದು ಗಂಟೆಗಿಂತ ಕಡಿಮೆ ಅವಧಿಯನ್ನು ಇದಕ್ಕಾಗಿ ಮೀಸಲಿಟ್ಟಿದ್ದಾರೆ. OTTಯಲ್ಲಿ ಸುಮಾರು 200-400 ರೂಪಾಯಿ ವ್ಯಯಿಸುತ್ತಿದ್ದಾರೆ. ಎರಡು ಸಾವಿರ ಮೊಬೈಲ್‌ ಬಳಕೆದಾರರ ಸಮೀಕ್ಷೆ ನಡೆಸಿದಾಗ ಈ ಅಂಶ ಬಹಿರಂಗವಾಗಿದೆ.

20.6 ಲಕ್ಷಕ್ಕೂ ಹೆಚ್ಚು ಬಳಕೆದಾರರ 143 ಮೊಬೈಲ್ ಅಪ್ಲಿಕೇಶನ್‌ಗಳ ಡೇಟಾದ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ ಆನ್‌ಲೈನ್ ಆಟಗಳಿಗೆ ಭಾಗವಹಿಸುವ ಶುಲ್ಕದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಒಟಿಟಿಯಲ್ಲಿ ಈ ಮೊತ್ತ ಕೇವಲ 17 ಪ್ರತಿಶತದಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...