ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ದೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುವುದಲ್ಲದೆ ಅನೇಕ ರೋಗಗಳನ್ನು ದೂರವಿಡುತ್ತದೆ. ಪುರುಷ ಅಥವಾ ಮಹಿಳೆ ಇಬ್ಬರಿಗೂ ನಿದ್ದೆ ಬೇಕೇ ಬೇಕು, ಆದರೆ ಯಾರು ಹೆಚ್ಚು ನಿದ್ದೆ ಮಾಡಬೇಕು ಎಂಬುದು ಪ್ರಶ್ನೆ.
ಇತ್ತೀಚಿನ ಸಂಶೋಧನೆಯೊಂದರಲ್ಲಿ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಸಂಶೋಧನೆಯಲ್ಲಿ ಪುರುಷರು ಮತ್ತು ಮಹಿಳೆಯರ ನಿದ್ರೆಯ ಅವಶ್ಯಕತೆಗಳು ವಿಭಿನ್ನವಾಗಿವೆ ಎಂದು ಹೇಳಲಾಗಿದೆ. ಪುರುಷರು ಮತ್ತು ಮಹಿಳೆಯರ ನಿದ್ರೆಯ ಮಾದರಿಗಳು ಪರಸ್ಪರ ಭಿನ್ನವಾಗಿರುತ್ತವೆ.
ಹೇಗಿರುತ್ತದೆ ಪುರುಷರು ಮತ್ತು ಮಹಿಳೆಯರ ನಿದ್ರೆಯ ಮಾದರಿ ?
ಪುರುಷ ಮತ್ತು ಮಹಿಳೆಯ ನಡುವೆ ಸಾಕಷ್ಟು ಜೈವಿಕ ವ್ಯತ್ಯಾಸವಿದೆ. ಪ್ರತಿಯೊಬ್ಬ ಮನುಷ್ಯನ ದೇಹವು ಗಡಿಯಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಗಾಢ ನಿದ್ದೆಯ ಆಳಕ್ಕಿಳಿಯಲು ಸಮಯ ತೆಗೆದುಕೊಳ್ಳುತ್ತಾರೆ. ಕೆಲವರು ಕೇವಲ 2 ಸೆಕೆಂಡ್ಗಳಲ್ಲಿ ನಿದ್ದೆ ಮಾಡಿದ್ರೆ, ಇನ್ನು ಕೆಲವರಿಗೆ ಅರ್ಧಗಂಟೆಯೇ ಬೇಕಾಗಬಹುದು.
ಮೆದುಳಿನಲ್ಲಿರುವ ಹೈಪೋಥಾಲಮಸ್ ಗ್ರಂಥಿಯು ಸಿರ್ಕಾಡಿಯನ್ ರಿದಮ್ ಅನ್ನು ಆನ್ ಮಾಡುತ್ತದೆ. ನಾವು ನಿದ್ದೆ ಮಾಡುವಾಗ ಸಿರ್ಕಾಡಿಯನ್ ರಿದಮ್ನಿಂದಾಗಿ ಇದು ಸ್ರವಿಸುತ್ತದೆ. ತದನಂತರ ನಾವು ನಿದ್ದೆ ಮಾಡಲು ಪ್ರಾರಂಭಿಸುತ್ತೇವೆ. ಮಲಗುವ ಮತ್ತು ಏಳುವ ಈ ಸಂಪೂರ್ಣ ಪ್ರಕ್ರಿಯೆಯನ್ನು ಪುರುಷರು ಮತ್ತು ಮಹಿಳೆಯರ ನಿದ್ರೆಯ ಮಾದರಿ ಎಂದು ಕರೆಯಲಾಗುತ್ತದೆ.
ಪುರುಷರಿಗಿಂತ ಹೆಚ್ಚು ನಿದ್ರಿಸುತ್ತಾರೆ ಮಹಿಳೆಯರು !
ಯುವಕರು 9 ಗಂಟೆಗಳ ಕಾಲ ನಿದ್ರೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಆದರೆ ಪುರುಷರು ಮತ್ತು ಮಹಿಳೆಯರ ನಿದ್ರೆಯ ಅಗತ್ಯತೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ. ಮಹಿಳೆಯರು ಬೇಗನೆ ಮತ್ತು ಹೆಚ್ಚು ಆಳವಾಗಿ ನಿದ್ರಿಸಬೇಕು. ನಿದ್ರೆಯ ಆಳವಾದ ಹಂತವು NREMನ ಮೂರನೇ ಹಂತವಾಗಿದೆ. ಹೆಚ್ಚಿನ ಜನರು ಈ ಹಂತದಲ್ಲಿ ರಾತ್ರಿಯ ಕಾಲುಭಾಗವನ್ನು ಕಳೆಯುತ್ತಾರೆ. ಆಗ ಮನಸ್ಸು ನಿಧಾನವಾಗುತ್ತದೆ ಮತ್ತು ದೇಹವು ಶಾಂತವಾಗುತ್ತದೆ.
ಸಂಶೋಧನೆಯ ಪ್ರಕಾರ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚುವರಿಯಾಗಿ ಸುಮಾರು 6 ರಿಂದ 28 ನಿಮಿಷಗಳ ನಿದ್ರೆ ಬೇಕು. ಆದರೆ ಹೀಗ್ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ನಿರ್ದಿಷ್ಟ ರೀತಿಯ ಹಾರ್ಮೋನುಗಳು ನಿದ್ರೆ/ಎಚ್ಚರ ಚಕ್ರದ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು. ಈಸ್ಟ್ರೊಜೆನ್ ಮತ್ತು ಇತರ ಹಾರ್ಮೋನುಗಳನ್ನು ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ. ಈ ಅಂಶ ಕೂಡ ನಿದ್ದೆಯ ಅವಶ್ಯಕತೆಯಲ್ಲಿ ಪಾತ್ರವಹಿಸಬಹುದು.