ವಿಶ್ವದ ಶೇಕಡ 10 ರಷ್ಟು ಜನ ಎಡಗೈ ಹೆಚ್ಚು ಬಳಸುತ್ತಾರಂತೆ. ಕೆಲವರು ಎಡಗೈ ಏಕೆ ಹೆಚ್ಚು ಬಳಸುತ್ತಾರೆಂದು ಜೈವಿಕವಾಗಿ ತಿಳಿದು ಬಂದಿಲ್ಲವಾದರು, ಕೆಲ ವಿಜ್ಞಾನಿಗಳ ಪ್ರಕಾರ ಇದು ಪ್ರತಿ ವ್ಯಕ್ತಿಯ ಇಚ್ಛೆಯ ಮೇಲಿದೆಯಂತೆ.
ಹಿಂದೆಲ್ಲ ಎಡಗೈ ಬಳಸುವವರಿಗೆ ಬಲಗೈ ಬಳಸಲು ಬಲವಂತ ಮಾಡುತ್ತಿದ್ದರಿಂದ ಅವರ ಸಂಖ್ಯೆ ಶೇಕಡ 2ಕ್ಕಿಂತ ಕಡಿಮೆ ಇತ್ತಂತೆ. ಹಾಗೆಯೇ ಮಹಿಳೆಯರಿಗಿಂತ ಪುರುಷರು ಹೆಚ್ಚು ಎಡಗೈ ಬಳಸುವವರಾಗಿರುತ್ತಾರಂತೆ.
ಕೆಲವರು ಎರಡೂ ಕೈಯನ್ನು ಸಮಾನವಾಗಿ ಬಳಸುವವರೂ ಇದ್ದಾರೆ. ಎಡಗೈ ಬಳಸುವವರ ಬಗ್ಗೆ ಈಗಲೂ ಪೂರ್ವಾಗ್ರಹವಿದ್ದು ಅದನ್ನು ಹೋಗಲಾಡಿಸಲು ಆಗಸ್ಟ್ 13 ನ್ನು ಎಡಗೈ ಬಳಸುವವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.