ಮುಂಬೈ: ನಿಶ್ಚಿತ ಠೇವಣಿ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಠೇವಣಿ ಸಂಗ್ರಹ ಹೆಚ್ಚಳ ಉದ್ದೇಶದಿಂದ ಬ್ಯಾಂಕುಗಳು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿಯನ್ನು ಠೇವಣಿಗಳಿಗೆ ನೀಡಲು ಮುಂದಾಗಿದೆ.
ಪಂಜಾಬ್ ಅಂಡ್ ಸಿಂಧು ಬ್ಯಾಂಕ್ ಠೇವಣಿಗಳಿಗೆ ವಾರ್ಷಿಕ ಶೇಕಡ 8 ರಿಂದ 8.5 ರಷ್ಟು ನೀಡುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಾಲ ನೀಡಿಕೆ ಪ್ರಮಾಣ ಠೇವಣಿ ಸಂಗ್ರಹ ಪ್ರಮಾಣಕ್ಕಿಂತ ಹೆಚ್ಚಾಗಿರುವುದರಿಂದ ಬ್ಯಾಂಕುಗಳು ಠೇವಣಿ ಆಕರ್ಷಿಸಲು ಹೆಚ್ಚಿನ ಬಡ್ಡಿ ದರ ನೀಡಲು ಮುಂದಾಗಿವೆ. ಚಿಲ್ಲರೆ ಹಣದುಬ್ಬರ ಪ್ರಮಾಣ 2022 ರಲ್ಲಿ ಹೆಚ್ಚಿನ ಅವಧಿಯವರೆಗೆ ಶೇಕಡ 6 ಕ್ಕಿಂತ ಮೇಲ್ಮಟ್ಟದಲ್ಲಿಯೇ ಇತ್ತು. ಹೀಗಾಗಿ ಆರ್ಬಿಐ ರೆಪೋ ದರವನ್ನು 6.50 ರಷ್ಟು ಹೆಚ್ಚಳ ಮಾಡಿದ್ದು, ಬ್ಯಾಂಕುಗಳು ಠೇವಣಿ ಸಂಗ್ರಹ ಉದ್ದೇಶದಿಂದ ನಿಶ್ಚಿತ ಬಡ್ಡಿ ದರ ಹೆಚ್ಚಳ ಮಾಡತೊಡಗಿದೆ.
ಎಸ್.ಬಿ.ಐ. 444 ನಲವತ್ನಾಲ್ಕು ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.3 5 ರಷ್ಟು ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇಕಡ 7.85 ರಷ್ಟು ಬಡ್ಡಿದರ ನೀಡಲಾಗುತ್ತಿದೆ. ಬ್ಯಾಂಕ್ ಆಫ್ ಇಂಡಿಯಾ 800 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.3 ರಷ್ಟು, ಹಿರಿಯ ನಾಗರಿಕರಿಗೆ ಶೇಕಡ 7.8ರಷ್ಟು ಬಡ್ಡಿದರ ನೀಡುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 666 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.25 ರಷ್ಟು, ಬ್ಯಾಂಕ್ ಆಫ್ ಬರೋಡಾ 399 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.05 ರಷ್ಟು, ಬ್ಯಾಂಕ್ ಆಫ್ ಮರ ಮಹಾರಾಷ್ಟ್ರ 200 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7ರಷ್ಟು ಬಡ್ಡಿದರ ನೀಡುತ್ತಿದ್ದು, ಹಿರಿಯ ನಾಗರೀಕರಿಗೆ ಹೆಚ್ಚುವರಿಯಾಗಿ ಶೇಕಡ 0.50 ಬಡ್ಡಿದರ ನೀಡಲಾಗುತ್ತದೆ.
ಕೆನರಾ ಬ್ಯಾಂಕ್ ನಿಂದ 400 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.15 ರಷ್ಟು, ಇಂಡಿಯನ್ ಬ್ಯಾಂಕ್ ನಿಂದ 555 ದಿನಗಳ ಠೇವಣಿಗೆ ಶೇಕಡ 7ರಷ್ಟು, ಯುಕೋ ಬ್ಯಾಂಕ್ 666 ದಿನಗಳ ನಿಶ್ಚಿತ ಠೇವಣಿಗೆ ಶೇಕಡ 7.15 ರಷ್ಟು ಬಡ್ಡಿ ದರ ನೀಡುತ್ತಿವೆ.