ಕಲಬುರಗಿ: ಬಡ್ಡಿ ಹಣ ವಸೂಲಿಗಾಗಿ ವ್ಯಕ್ತಿ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಆಸಿಡ್ ದಾಳಿಗೆ ಒಳಗಾದ ಜುಬೇರ್ ಬಲಗೈ ಮತ್ತು ಕಾಲಿನ ಭಾಗ ಸಂಪೂರ್ಣ ಸುಟ್ಟು ಹೋಗಿದ್ದು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೀನು ವ್ಯಾಪಾರಕ್ಕಾಗಿ ಜುಬೇರ್ ಅವರು ಅರ್ಷದ್ ಮತ್ತು ಪರ್ವೇಜ್ ಅವರ ಬಳಿ 35 ಲಕ್ಷ ರೂ. ಪಡೆದಿದ್ದರು. ಇದಕ್ಕೆ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 90 ಲಕ್ಷ ರೂಪಾಯಿ ಕೊಡುವಂತೆ ಪೀಡಿಸಿದ್ದರು. ಹಣ ನೀಡುವಂತೆ ಕರೆಸಿದ ದುಷ್ಕರ್ಮಿಗಳು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಕಮ್ರಾನ್ ಖಾನ್ ಎನ್ನುವ ವ್ಯಕ್ತಿಯಿಂದ ಜುಬೇರ್ ಮೇಲೆ ಆಸಿಡ್ ದಾಳಿ ಮಾಡಿಸಲಾಗಿದೆ.
ಕಲಬುರಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಆಸಿಡ್ ದಾಳಿ ನಡೆದಿದೆ. ದಾಳಿ ಮಾಡಿದ ಕಮ್ರಾನ್ ಖಾನ್ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸುಗಳು ಇವೆ. ಬಡ್ಡಿ ಹಣ ಕೊಡಲು ಒಪ್ಪದೇ ಇದ್ದಾಗ ಆಸಿಡ್ ದಾಳಿ ನಡೆದಿದ್ದು, ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.