ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ, ಮಾವುತರು, ಕಾವಾಡಿಗಳ ಜೊತೆಗೆ ಅರಣ್ಯಾಧಿಕಾರಿಗಳಿಗೆ 1.87 ಕೋಟಿ ರೂ. ಮೌಲ್ಯದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಗೆ, ಸಾರ್ವಜನಿಕರಿಗೂ ಪ್ರತ್ಯೇಕವಾಗಿ 50 ಲಕ್ಷ ರೂಪಾಯಿ ಕಡಿಮೆ ಸೌಲಭ್ಯವಿದೆ.
ಗಜಪಡೆಯ ತಾಲೀಮು, ಮೆರವಣಿಗೆ ಸಂದರ್ಭದಲ್ಲಿ ಅನಾಹುತದಿಂದ ಗಾಯಗೊಂಡಲ್ಲಿ, ಸಾರ್ವಜನಿಕರಿಗೆ ಹಾನಿಯಾದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ವಿಮೆ ಮಾಡಿಸಲಾಗುತ್ತದೆ. ಆಗಸ್ಟ್ 21ರಂದು ಮೈಸೂರಿಗೆ ಗಜಪಡೆ ಆಗಮಿಸಲಿದ್ದು, ದಸರಾ ಮಹೋತ್ಸವ ಮುಗಿದು ವಾಪಸ್ ಹೋಗುವವರೆಗೂ ವಿಮೆ ಸೌಲಭ್ಯ ಚಾಲ್ತಿಯಲ್ಲಿರುತ್ತದೆ. ಒಟ್ಟಾರೆ 2,37,50,000 ರೂ.ಗೆ ವಿಮೆ ಮಾಡಿಸಿದ್ದು, ಅರಣ್ಯ ಇಲಾಖೆ ವತಿಯಿಂದ ಪ್ರೀಮಿಯಂ ಪಾವತಿಸಲಾಗಿದೆ.