ಬೆಂಗಳೂರು: ಅರಣ್ಯದಂಚಿನ ವಸತಿ ಪ್ರದೇಶಗಳ ಜನರಿಗೆ ಸರ್ಕಾರದ ಸಹಯೋಗದೊಂದಿಗೆ ವಿಮೆ ಸೌಲಭ್ಯ ಕಲ್ಪಿಸುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಾನವ -ಆನೆ ಸಂಘರ್ಷ ನಿರ್ವಹಣೆ ಅಂತರಾಷ್ಟ್ರೀಯ ಸಮಾವೇಶ ಅಂಗವಾಗಿ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಆನೆಗಳ ದಾಳಿಯಿಂದ ಕಾಡಂಚಿನ ಗ್ರಾಮ, ವಸತಿ ಪ್ರದೇಶಗಳ ಜನರಿಗೆ ಹೆಚ್ಚಿನ ಹಾನಿ ಆಗುತ್ತದೆ. ಕೆಲವೊಮ್ಮೆ ಪ್ರಾಣ ಹಾನಿ ಸಂಭವಿಸುತ್ತದೆ. ಪ್ರಾಣಿಗಳ ದಾಳಿಯಿಂದ ತೊಂದರೆಯಾಗುತ್ತದೆ. ಹೀಗಾಗಿ ಸರ್ಕಾರದ ಸಹಯೋಗದಲ್ಲಿ ವಿಮೆ ಸೌಲಭ್ಯ ನೀಡಬೇಕೆಂಬ ಬೇಡಿಕೆಗಳಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.