ನೀವೊಂದು ವಿಮೆ ಪಾಲಿಸಿ ಖರೀದಿ ಮಾಡಿರುತ್ತೀರಿ ಎಂದುಕೊಳ್ಳಿರಿ. ಅದಕ್ಕೆ ಮಾಸಿಕ ಅಥವಾ ವಾರ್ಷಿಕವಾಗಿ ಇಂತಿಷ್ಟು ಪ್ರೀಮಿಯಂ ಪಾವತಿ ಮಾಡಬೇಕೆಂದು ವಿಮೆ ಕಂಪನಿಯು ನಿಗದಿಪಡಿಸಿರುತ್ತದೆ.
ಅದರಂತೆ ಪ್ರೀಮಿಯಮ್ ಪಾವತಿ ಮಾಡದೆಯೇ, ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಮೆ ಪಾಲಿಸಿಯ ಅವಧಿಯು ಮುಗಿದಿದ್ದರೆ ಅಥವಾ ವಿಮೆ ಪಾಲಿಸಿಯು ನಿಷ್ಕ್ರಿಯಗೊಂಡಿದ್ದೇ ಆದಲ್ಲಿ, ಆಗ ಸಾರಾಸಗಟಾಗಿ ಕಂಪನಿಯು ವಿಮೆ ಮೊತ್ತ ಪಾವತಿಗೆ ನೀವು ಮಾಡುವ ಮನವಿಯನ್ನು ತಿರಸ್ಕರಿಸಬಹುದು. ಅದರೆ, ಇನ್‌ಶ್ಯೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ರಸ್ತೆ ಅಪಘಾತದಲ್ಲಿ ಹೆಚ್ಚುವರಿ ಪರಿಹಾರ ನೀಡುವ ಸಂಬಂಧ ಆದೇಶ ನೀಡಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ಆಯೋಗವು (ಎನ್‌ಸಿಡಿಆರ್‌ಸಿ ) ಹೊರಡಿಸಿದ್ದ ಆದೇಶವನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ವೇಳೆ ಮಹತ್ವದ ತೀರ್ಮಾನ ಕೊಟ್ಟಿದೆ. ಸರ್ಕಾರಿ ಸ್ವಾಮ್ಯದ ಜೀವ ವಿಮೆ ಮಂಡಳಿ (ಎಲ್‌ಐಸಿ) ಕೋರ್ಟ್ ಮೆಟ್ಟಿಲೇರಿತ್ತು.
ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ
ರಸ್ತೆ ಅಪಘಾತದಲ್ಲಿ ಮೃತ ಪತಿಯು ಜೀವನ ಸುರಕ್ಷಾ ಯೋಜನೆ ಅಡಿಯಲ್ಲಿ3.75 ಲಕ್ಷ ರೂ. ಮೊತ್ತದ ಪಾಲಿಸಿಯನ್ನು ಪಡೆದಿದ್ದರು. ಅಪಘಾತದಲ್ಲಿ ಸತ್ತರೆ, ಹೆಚ್ಚುವರಿ 3.75 ಲಕ್ಷ ರೂ. ಪಾವತಿಸುತ್ತೇವೆ ಎಂದು ಎಲ್‌ಐಸಿ ಹೇಳಿತ್ತು. ಆದರೆ ಕೊಟ್ಟಿಲ್ಲ ಎಂದು ಮೃತನ ಪತ್ನಿಯು ಕೇಸ್ ದಾಖಲಿಸಿ ಗ್ರಾಹಕರ ವ್ಯಾಜ್ಯ ಆಯೋಗದಿಂದ ತಮ್ಮ ಪರವಾಗಿ ತೀರ್ಪು ಪಡೆದಿದ್ದರು. ಇದನ್ನು ಎಲ್‌ಐಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಇಂಗನ್ನು ಬಿಸಿ ಮಾಡಿ ಈ ಭಾಗಕ್ಕೆ ಹಚ್ಚಿದರೆ ಹೊಟ್ಟೆ ನೋವು ಮಾಯ
ಆರು ತಿಂಗಳ ಪ್ರೀಮಿಯಮ್ ಮೊತ್ತ ಬಾಕಿ ಉಳಿಸಿಕೊಂಡಿದ್ದರಿಂದ ಮೃತನ ಪತ್ನಿಗೆ ಪಾಲಿಸಿಯಲ್ಲಿನ ಹೆಚ್ಚುವರಿ ಪರಿಹಾರ ಮೊತ್ತ ನೀಡಲಾಗಲ್ಲ ಎಂದು ಕಂಪನಿ ವಾದಿಸಿತ್ತು.
ಒಂದು ವೇಳೆ ವಿಮೆ ಪಾಲಿಸಿ ಮರುನವೀಕರಣ ಆಗಿದ್ದರೆ, ಅದರಲ್ಲಿನ ನಿಯಮಗಳಂತೆ ಹೆಚ್ಚುವರಿ ಪರಿಹಾರ ನೀಡಬೇಕಿತ್ತು. ಆದರೆ ಸದ್ಯ, ಹೆಚ್ಚುವರಿ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.