ಬೆಂಗಳೂರು: 2024-25 ನೇ ಸಾಲಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಅಡಿ ತರಗತಿವಾರು ಪ್ರತಿ ಮಗುವಿನ ಎತ್ತರ(Height) ಮತ್ತು ತೂಕ(Weight) ಅಳತೆ ಮಾಡಿ ವಿವರವನ್ನು ಶಾಲಾ ಹಂತದಲ್ಲಿ ಸರಿಯಾಗಿ ದಾಖಲೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಪಿಎಂ ಪೋಷಣ್ ನಿರ್ದೇಶಕರು ತಿಳಿಸಿದ್ದಾರೆ.
ಶಾಲೆಗಳು ಪ್ರಾರಂಭವಾಗಿ ಜುಲೈ ಮೊದಲನೇ ವಾರದಲ್ಲಿ ಎಲ್ಲಾ 1-10 ನೇ ತರಗತಿಗಳ ಮಕ್ಕಳ ಎತ್ತರ(Height) ಮತ್ತು ತೂಕ(Weight) ಅಳತೆಯನ್ನು ಶಾಲೆಯ ದೈಹಿಕ ಶಿಕ್ಷಕ ಶಿಕ್ಷಕರು ಅಥವಾ ತರಗತಿ ಶಿಕ್ಷಕರ ಸಹಾಯದಿಂದ ಮಾಡಿಸಿ ದಾಖಲಿಸುವ ಕ್ರಮ ವಹಿಸಲು ಸೂಚಿಸಲಾಗಿದೆ.
ಅದೇ ರೀತಿ ಫೆಬ್ರವರಿ-2025 ಮಾಹೆಯೊಳಗಾಗಿ ಮತ್ತೊಮ್ಮೆ ಎಲ್ಲಾ ಶಾಲೆಗಳಲ್ಲಿ 1-10 ನೇ ತರಗತಿಗಳ ಮಕ್ಕಳ ಎತ್ತರ ಮತ್ತು ತೂಕ ಅಳತೆಯೆನ್ನು ದಾಖಲಿಸಲು ತಿಳಿಸಲಾಗಿದೆ.
ಸದರಿ ದಾಖಲೆಗಳ ಶಾಲಾವಾರು ಮಾಹಿತಿಯನ್ನು ತಾಲೂಕು ದೈಹಿಕ-ಆರೋಗ್ಯ ಶಿಕ್ಷಣ ಅಧಿಕಾರಿಗಳು(TPO) ಸಂಗ್ರಹಿಸಿ, ಕ್ರೂಢೀಕರಿಸಿ, ದೃಢೀಕರಿಸಿ, ತಾಲೂಕು ಪಂಚಾಯತ್ ಪಿ.ಎಂ.ಪೋಷಣ್, ಸಹಾಯಕ ನಿರ್ದೇಶಕರಿಗೆ ತಪ್ಪದೇ ಸಲ್ಲಿಸುವುದು. ಸಹಾಯಕ ನಿರ್ದೇಶಕರು ತಾಲೂಕು ಹಂತದ ವರದಿಯನ್ನು ದೃಢೀಕರಣದೊಂದಿಗೆ ಜಿಲ್ಲಾ ಪಂಚಾಯತ್ ಹಂತಕ್ಕೆ ಸಲ್ಲಿಸುವುದು. ಜಿಲ್ಲಾ ಪಂಚಾಯತ್ ಪಿಎಂಪೋಷಣ್ ಆಧಿಕಾರಿಗಳು ತಾಲ್ಲೂಕುವಾರು ಸಲ್ಲಿಸಿರುವ ಮಾಹಿತಿಯನ್ನು ಕ್ರೋಢಿಕರಿಸಿ ರಾಜ್ಯ ಪಿಎಂ ಪೋಷಣ್ ನಿರ್ದೇಶಕರ ಕಚೇರಿಗೆ ಜು. 31 ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.