ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತೇವೆ, ಆ ವೇಳೆ ಆಲೂಗಡ್ಡೆ ಸಿಪ್ಪೆ ತೆಗೆದು ಎಸೆಯುತ್ತೇವೆ. ಆದರೆ ಈ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ, ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
*ಆಲೂಗಡ್ಡೆ ಸಿಪ್ಪೆಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದೆ. ಇದನ್ನು ಸೇವಿಸಿದರೆ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ,
*ಆಲೂಗಡ್ಡೆ ಸಿಪ್ಪೆ ಬಳಸಿ ಚರ್ಮದ ಆರೈಕೆ ಮಾಡಬಹುದು. ಇದರಿಂದ ಚರ್ಮದ ಮೇಲಿನ ಕಪ್ಪು ಕಲೆ, ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆಗಳನ್ನು ನಿವಾರಿಸಬಹುದು. ಇದು ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಗಳನ್ನು ನಿವಾರಿಸುತ್ತದೆ,
*ಆಲೂಗಡ್ಡೆ ಸಿಪ್ಪೆ ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಸಿಪ್ಪೆಯಿಂದ ರಸ ತೆಗೆದು ಕೂದಲಿಗೆ ಹಚ್ಚಿ ಬಳಿಕ ವಾಶ್ ಮಾಡಿ. ಇದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯಲು ಸಹಕಾರಿಯಾಗಿದೆ.