ಬೆಳಿಗ್ಗೆ ಏಳುವುದು ತಡವಾದರೆ ಅಥವಾ ಸಡನ್ನಾಗಿ ಮನೆಗೆ ಯಾರಾದರೂ ಗೆಸ್ಟ್ ಬಂದರೆ ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಗೋಧಿ ಹಿಟ್ಟು ಇದ್ದರೆ ಚಿಂತೆ ಮಾಡುವುದೇ ಬೇಡ. ಥಟ್ಟಂತ ಮಾಡಿಬಿಡಬಹುದು ಈ ಗೋಧಿ ದೋಸೆ.
ಮಾಡುವ ವಿಧಾನ:
ಒಂದು ಬೌಲ್ ಗೆ ½ ಕಪ್ ಗೋಧಿ ಹಿಟ್ಟು ½ ಕಪ್ ಅಕ್ಕಿಹಿಟ್ಟು, 2 ಟೇಬಲ್ ಸ್ಪೂನ್ ರವೆ, 1 ಟೇಬಲ್ ಸ್ಪೂನ್ ಮೊಸರು, 1 ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಗೋಧಿಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ 1 ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಂಡು ಹಾಕಿ ಹಾಗೇ 1 ಇಂಚು ಶುಂಠಿ ತುರಿ, 2 ಹಸಿಮೆಣಸು ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, ಕೊತ್ತಂಬರಿ ಸೊಪ್ಪು 1 ಟೇಬಲ್ ಸ್ಪೂನ್, 5 ಎಸಳು ಕರಿಬೇವು ಸಣ್ಣಗೆ ಕತ್ತರಿಸಿಕೊಂಡದ್ದು ಜೊತೆಗೆ 1 ಟೀ ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ½ ಕಪ್ ನೀರು ಹಾಕಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ. ಹಿಟ್ಟು ದಪ್ಪಗಾಗಿದ್ದರೆ ಸ್ವಲ್ಪ ನೀರು ಸೇರಿಸಿಕೊಂಡು ದೋಸೆ ತವಾವನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ದೋಸೆ ಮಾಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.