ಹೊಳೆಯುವ ಪಾತ್ರೆಗಳು ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ.
ಅಡುಗೆ ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು ಕರಕಲಾಗುತ್ತದೆ. ಇವುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು ಕಷ್ಟಸಾಧ್ಯ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಕರಕಲು ಪಾತ್ರೆಗೆ ಹೊಳಪು ನೀಡಬಹುದು.
ಸುಟ್ಟಿರುವ ಪಾತ್ರೆಗೆ 1 ಚಮಚ ಅಡಿಗೆ ಸೋಡಾ, ಎರಡು ಟೀ ಚಮಚ ನಿಂಬೆ ರಸ ಮತ್ತು ಬಿಸಿ ನೀರನ್ನು ಹಾಕಿ ಸ್ವಲ್ಪ ಕಾಲ ಅದನ್ನು ಹಾಗೇ ಇಡಿ. ನಂತರ ಉಕ್ಕಿನ ಪಟ್ಟಿಯೊಂದಿಗೆ ತಿಕ್ಕಿ ಸ್ವಚ್ಛಗೊಳಿಸಿ. ಹೀಗೆ ಮಾಡಿದ್ರೆ ಸುಟ್ಟ ಪಾತ್ರೆಯ ಕಲೆ ಮಾಯ.
ಕಚ್ಚಾ ನಿಂಬೆ ಮತ್ತು ಬಿಸಿ ನೀರನ್ನು ತೆಗೆದುಕೊಳ್ಳಿ. ಮೊದಲು ಸುಟ್ಟ ಪಾತ್ರೆಗೆ ನಿಂಬೆ ಹಣ್ಣಿನಿಂದ ಉಜ್ಜಿ, ನಂತರ ಬಿಸಿ ನೀರು ಹಾಕಿ. ಬ್ರಶ್ ನಿಂದ ನಿಧಾನವಾಗಿ ತಿಕ್ಕಿ, ಇದರಿಂದ ಸುಟ್ಟು ಕರಕಲಾದ ಪಾತ್ರೆಗಳು ಹೊಳೆಯುತ್ತವೆ.
ಸುಟ್ಟ ಪಾತ್ರೆಗಳ ಕಲೆ ತೆಗೆದು ಹಾಕಲು ಉಪ್ಪು ಕೂಡ ಸಹಾಯಕ. ಸುಟ್ಟ ಪಾತ್ರೆಗೆ ಉಪ್ಪು ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಪಾತ್ರೆ ತೊಳೆಯುವ ಬ್ರಶ್ನಿಂದ ಸುಟ್ಟ ಭಾಗವನ್ನು ಸ್ವಚ್ಛಗೊಳಿಸಿ. 3-4 ನಿಮಿಷಗಳ ಕಾಲ ಇದನ್ನು ಮಾಡಬೇಕು.
ಟೊಮೋಟೋ ರಸವನ್ನೂ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದಾಗಿದೆ. ಸುಟ್ಟ ಪಾತ್ರೆಗೆ ಟೊಮೋಟೋ ರಸ ಮತ್ತು ನೀರನ್ನು ಬಿಸಿ ಮಾಡಿ ಹಾಕಿ. ಈಗ ಅದನ್ನು ಉಜ್ಜಿ ಮತ್ತು ಅದನ್ನು ಸ್ವಚ್ಛಗೊಳಿಸಿ.
ಪಾತ್ರೆಗಳನ್ನು ಮೆರುಗುಗೊಳಿಸಲು ಈರುಳ್ಳಿ ಬಳಸಿ. ಈರುಳ್ಳಿ ಒಂದು ಸಣ್ಣ ತುಂಡು ತೆಗೆದುಕೊಳ್ಳಿ. ಕರಕಲಾದ ಪಾತ್ರೆಗೆ ನೀರು ಹಾಕಿ ಈರುಳ್ಳಿ ಸೇರಿಸಿ ಬಿಸಿ ಮಾಡಿ. ಶೀಘ್ರದಲ್ಲೇ ಪಾತ್ರೆಗಳ ಕಲೆಯ ಗುರುತುಗಳು ಅಳಿಸಿ ಹೋಗುತ್ತವೆ.