ಕರ್ಮ ಯಾವತ್ತಿದ್ರೂ ವಾಪಸ್ ಬಂದೇ ಬರುತ್ತದೆ ಅನ್ನೋ ಮಾತಿದೆ. ಆದ್ರೆ ಅದು ತುಂಬಾ ತಡವಾಗೇನಲ್ಲ. ಬಹುಬೇಗನೇ ವಾಪಸ್ ಬಂದ್ ಬಿಡುತ್ತೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ವೈರಲ್ ಆಗ್ತಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ ನ ಹಿಂಬದಿ ಕೂತಿದ್ದಾಳೆ. ಒಂದು ಕ್ಷಣ ಆಕೆ ಬೈಕ್ ನಲ್ಲಿ ಎದ್ದು ನಿಂತು ಪಕ್ಕದಲ್ಲಿ ಹೋಗ್ತಿದ್ದ ಬೈಕ್ ಸವಾರನನ್ನು ತನ್ನ ಕಾಲಿಂದ ಒದೆಯಲು ಯತ್ನಿಸುತ್ತಾಳೆ. ಆದರೆ ಆಕೆಯು ಒದೆಯುವ ಯತ್ನದಲ್ಲಿ ವಿಫಲಳಾಗುತ್ತಾಳೆ. ಹಾಗು ಅವಳು ತನ್ನ ಸಮತೋಲನವನ್ನು ಕಳೆದುಕೊಂಡು ಬೈಕ್ ನಿಂದ ಕೆಳಕ್ಕೆ ರಸ್ತೆಯಲ್ಲಿ ಬೀಳುತ್ತಾಳೆ. ಇದನ್ನು ತಿಳಿಯದೆ ಆಕೆಯನ್ನು ಕೂರಿಸಿಕೊಂಡಿದ್ದ ಬೈಕ್ ಸವಾರ ಸ್ವಲ್ಪ ದೂರ ಮುಂದೆ ಹೋಗಿ ನಂತರ ತಿರುಗಿನೋಡುತ್ತಾನೆ.
ಎಂಟು ಸೆಕೆಂಡುಗಳ ವೀಡಿಯೊ ವೈರಲ್ ಆಗಿದ್ದು ಕರ್ಮ ವಾಪಸ್ ಬಂದೇ ಬರುತ್ತೆ ಎಂದಿದ್ದಾರೆ. ಯುವತಿಯ ನಡೆ ಖಂಡಿಸಿರುವ ಹಲವರು ತತ್ ಕ್ಷಣದ ಕರ್ಮ ಎಂದು ಕಮೆಂಟ್ ಮಾಡಿದ್ದಾರೆ.