ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಒಬ್ಬ ಅಜಾಗರೂಕ ಆಟೋ ರಿಕ್ಷಾ ಚಾಲಕ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಅವನಿಗೆ ತಕ್ಷಣದ ಕರ್ಮ ಎದುರಾಗಿದ್ದು, ಈ ವೇಳೆ ಅವನ ಆಟೋ ರಿಕ್ಷಾ ಉರುಳುತ್ತದೆ.
“ಕರ್ಮ ಕ್ರೂರವಾಗಬಹುದು ಮತ್ತು ಕೆಲವೊಮ್ಮೆ ಅದು ತಕ್ಷಣವೇ ಸಂಭವಿಸಬಹುದು” ಎಂಬಂತೆ ತಮಿಳುನಾಡಿನ ಕಡಯನಲೂರಿನಲ್ಲಿ ನಡೆದ ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಈ ಪಾಠವನ್ನು ಕಠಿಣ ರೀತಿಯಲ್ಲಿ ಕಲಿತಿದ್ದಾನೆ.
ವಿಡಿಯೋದಲ್ಲಿ ಚಾಲಕ ತನ್ನ ರಿಕ್ಷಾವನ್ನು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದು,ಮುಂದೆ ಹೋಗುತ್ತಿದ್ದ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಚಾಲಕನಿಗೆ ತಕ್ಷಣದ ಕರ್ಮ ಎದುರಾಗಿ ಅವನ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
Autorickshaw toppled as the driver tried to hit a boy riding a bicycle with his hand while crossing him in Kadayanallur pic.twitter.com/J75pvIZ96p
— Thinakaran Rajamani (@thinak_) January 21, 2025
View this post on Instagram