ಶಿವಮೊಗ್ಗ : ‘ಪ್ಯಾಲೆಸ್ಟೈನ್’ ಬೆಂಬಲಿಸಿ ಶಿಕಾರಿಪುರ ಮಸೀದಿ ಬಳಿ ‘ಬ್ಯಾನರ್’ ಅಳವಡಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನೂರಾನಿ ಮಸೀದಿ ಬಳಿಯಲ್ಲಿ ಬ್ಯಾನರ್’ ಅಳವಡಿಸಲಾಗಿದ್ದು, ಇಸ್ರೇಲ್ ವಿರೋಧಿಸಿ, ಪ್ಯಾಲೆಸ್ಟೈನ್ ಬೆಂಬಲಿಸಿ ಬ್ಯಾನರ್ ಹಾಕಲಾಗಿದೆ.
ಇಸ್ರೇಲ್ ವಸ್ತುಗಳನ್ನು ಬಹಿಷ್ಕರಿಸಿ ಪ್ಯಾಲೆಸ್ಟೈನ್ಬೆಂಬಲಿಸುವಂತೆ ಮನವಿಯನ್ನು ಮಾಡಲಾಗಿದೆ.ಈ ವಿವಾದಿತ ಬ್ಯಾನರ್ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದ್ದು, ಬ್ಯಾನರ್ ತೆರವುಗೊಳಿಸುವಂತೆ ಆಗ್ರಹಿಸಿ ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.