ಸಾಮಾಜಿಕ ಜಾಲತಾಣ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದೆ. ಅದಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದ ಬಗ್ಗೆ ಹೇಳುವಾಗ ಬರುವ ಹೆಸರುಗಳಲ್ಲಿ ಇನ್ಸ್ಟಾಗ್ರಾಮ್ ಕೂಡ ಒಂದು. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ ಫೋಟೋ ಮತ್ತು ವಿಡಿಯೋ ಹಂಚಿಕೆ ವೇದಿಕೆ ಇನ್ಸ್ಟಾಗ್ರಾಮ್, ಮಧ್ಯಾಹ್ನ ಇದ್ದಕ್ಕಿದ್ದಂತೆ ಬಂದ್ ಆಗಿತ್ತು.
ಸುಮಾರು ಮೂರು-ನಾಲ್ಕು ಗಂಟೆಗಳ ಹಿಂದೆ, ಮಧ್ಯಾಹ್ನ 12.15 ರ ಸುಮಾರಿಗೆ, ಭಾರತದ ಅನೇಕ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಖಾತೆ ಬಳಸಲು ಸಾಧ್ಯವಾಗಲಿಲ್ಲ. ಇನ್ಸ್ಟಾಗ್ರಾಮ್ ಇದ್ದಕ್ಕಿದ್ದಂತೆ ಕ್ರ್ಯಾಶ್ ಆಗಿತ್ತು. ಅನೇಕರಿಗೆ ಅಪ್ಲಿಕೇಷನ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ವರದಿ ಪ್ರಕಾರ, ವಿಶ್ವದ ಹಲವು ಸ್ಥಳಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಆದ್ರೆ ದೊಡ್ಡ ಸಮಸ್ಯೆ ಭಾರತದಲ್ಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಅನೇಕ ನಗರಗಳಲ್ಲಿ ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಮ್ ಕೆಲಸ ನಿಲ್ಲಿಸಿದೆ.
ಇನ್ಸ್ಟಾಗ್ರಾಮ್ ಸ್ಥಗಿತಗೊಂಡ ಸ್ವಲ್ಪ ಸಮಯದ ನಂತರ, ಬಳಕೆದಾರರು ಈ ಸಮಸ್ಯೆಯನ್ನು ಟ್ವಿಟರ್ ಮತ್ತು ಡೌನ್‌ಡೆಕ್ಟರ್ ಫೋರಮ್‌ಗಳಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಇನ್ಸ್ಟಾಗ್ರಾಮ್ ರಿಫ್ರೆಶ್ ಆಗಿಲ್ಲ, ಡಿಎಂ ಸರಿಯಾಗಿ ಕೆಲಸ ಮಾಡ್ತಿಲ್ಲ, ಆಪ್ ಪ್ರೊಫೈಲ್ ಸಿಗ್ತಿಲ್ಲ ಹೀಗೆ ಅನೇಕ ಸಮಸ್ಯೆಗಳನ್ನು ಬಳಕೆದಾರರು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಾದ ಈ ಸಮಸ್ಯೆಗೆ ಇನ್ನೂ ಕಾರಣ ತಿಳಿದಿಲ್ಲ. ಈ ಬಗ್ಗೆ ಫೇಸ್ಬುಕ್ ನಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ಕಂಪನಿ ನೀಡಿಲ್ಲ.