ಇನ್ಸ್ಟಾಗ್ರಾಮ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ,ವಿಡಿಯೋ ಹಂಚಿಕೆ ಮಾಡುವುದು ಮಾತ್ರವಲ್ಲ ಅದ್ರಲ್ಲಿ ಗಳಿಕೆ ಕೂಡ ಮಾಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ಹಣ ಗಳಿಸಲು ಫಾಲೋವರ್ಸ್ ಅಗತ್ಯವಿರುತ್ತದೆ. ನೀವು ಕೇವಲ 5 ಸಾವಿರ ಫಾಲೋವರ್ಸ್ ಹೊಂದಿದ್ದರೆ ಸಾಕು. ಯಾವುದಾದ್ರೂ ಬ್ರ್ಯಾಂಡ್ ಅಥವಾ ಕಂಪನಿ ವಸ್ತುಗಳ ಪ್ರಚಾರ ಮಾಡುವ ಮೂಲಕ ಹಣವನ್ನು ಗಳಿಸಬಹುದು.
ಉತ್ಪನ್ನವನ್ನು ಜಾಹೀರಾತು ಮಾಡಿದ್ರೆ ನಿಮಗೆ ಹಣ ಸಿಗುತ್ತದೆ. ಇದಲ್ಲದೆ ಅಂಗಸಂಸ್ಥೆ ಲಿಂಕ್‌ಗಳ ಮೂಲಕವೂ ಹಣ ಗಳಿಸಬಹುದು. ನೀವು ಕಂಪನಿ ಲಿಂಕ್ ಪೋಸ್ಟ್ ಮಾಡಬೇಕಾಗುತ್ತದೆ. ನೀವು ಪೋಸ್ಟ್ ಮಾಡಿದ ಲಿಂಕ್ ಓಪನ್ ಮಾಡಿ ವ್ಯಕ್ತಿಗಳು ಖರೀದಿ ಮಾಡಿದ್ರೆ ನಿಮ್ಮ ಖಾತೆಗೆ ಹಣ ಬರುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ನಿಮ್ಮ ವಸ್ತುಗಳನ್ನು ಕೂಡ ಮಾರಾಟ ಮಾಡಬಹುದು. ವ್ಯಪಾರಕ್ಕೆ ಸ್ವಂತ ಪುಟ ರಚಿಸಬೇಕು. ಅಲ್ಲಿ ನಿಮ್ಮ ಉತ್ಪನ್ನಗಳ ಜಾಹೀರಾತು ಮಾಡಬೇಕು. ಆನ್ಲೈನ್ ನಲ್ಲಿಯೇ ಮಾರಾಟ ಮಾಡಬಹುದು. ಇದಲ್ಲದೆ, ಯುಟ್ಯೂಬ್ ನಂತೆ ಆರೋಗ್ಯ, ಆಹಾರದ ವಿಡಿಯೋ ಅಪ್ಲೋಡ್ ಮಾಡುವ ಮೂಲಕವೂ ನೀವು ಹಣ ಗಳಿಸಬಹುದು. ನಿಮ್ಮ ವಿಡಿಯೋ, ಫೋಟೋಗಳಿಗೆ ಹೆಚ್ಚು ವೀವ್ಸ್ ಬಂದಂತೆ ನಿಮ್ಮ ಖಾತೆಗೆ ಹಣ ಬರಲು ಶುರುವಾಗುತ್ತದೆ. ಆಕರ್ಷಕ ವಿಷ್ಯಗಳನ್ನು ನೀವು ಹಂಚಿಕೊಂಡಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ.