
ಮಾಡೆಲ್ ಜೇನ್ ರಿವೆರಾಳ ತಂದೆ ವೃತ್ತಿಯಲ್ಲಿ ಪಶುವೈದ್ಯರಾಗಿದ್ದರು. ಶವವನ್ನು ಇರಿಸಿದ್ದ ಪೆಟ್ಟಿಗೆಯ ಮುಂಭಾಗ ಸ್ವಲ್ಪವೂ ಅಳುಕಿಲ್ಲದೆ ಈಕೆ ಫೋಟೋಗೆ ಪೋಸ್ ನೀಡಿದ್ದಾಳೆ. 20 ವರ್ಷದ ಮಾಡೆಲ್ ಆಗಿರುವ ಜೇನ್, ಒಂದು ಲಾಂಗ್ ಸ್ಲೀವ್ ಮತ್ತು ಕಪ್ಪು ಸೂಟ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿದ್ದಾಳೆ.
ಒಟ್ಟು ಎಂಟು ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ತಂದೆ ತನ್ನ ಆತ್ಮೀಯ ಗೆಳೆಯರಾಗಿದ್ದರು ಎಂದು ಕೂಡ ಬರೆದಿದ್ದಾಳೆ. ಜೇನ್ ಳ ಪೋಸ್ಟ್ ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ. ಅಲ್ಲದೆ ಈಕೆ ತನ್ನ ತಂದೆಗೆ ಅಗೌರವ ಸೂಚಿಸಿದ್ದಾಳೆ ಎಂದು ದೂರಿದ್ದಾರೆ. ವ್ಯಾಪಕ ಟೀಕೆ ಬಳಿಕ ತನ್ನ ಪೋಸ್ಟ್ ಅನ್ನು ಜೇನ್ ಅಳಿಸಿದ್ದಾಳೆ.
https://twitter.com/myronmy9/status/1452972020241559557?ref_src=twsrc%5Etfw%7Ctwcamp%5Etweetembed%7Ctwterm%5E1452972020241559557%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-news-instagram-influencer-criticised-for-doing-a-photoshoot-at-her-dads-funeral-netizens-call-it-disrespectful-5071316%2F