alex Certify ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಇನ್​​ಸ್ಟಾಗ್ರಾಂನಲ್ಲಿ ಇನ್ಮುಂದೆ ಮಾಡಬಹುದು 90 ಸೆಕೆಂಡುಗಳ ರೀಲ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಇನ್​​ಸ್ಟಾಗ್ರಾಂನಲ್ಲಿ ಇನ್ಮುಂದೆ ಮಾಡಬಹುದು 90 ಸೆಕೆಂಡುಗಳ ರೀಲ್ಸ್….!

ಭಾರತದಲ್ಲಿ ಬ್ಯಾನ್​ಗೊಳಗಾಗಿರುವ ಟಿಕ್​ಟಾಕ್​ ಮತ್ತೆ ದೇಶಕ್ಕೆ ರೀ ಎಂಟ್ರಿ ನೀಡಲಿದೆ ಎಂಬ ವರದಿಗಳ ನಡುವೆಯೇ ಮೆಟಾ ಮಾಲೀಕತ್ವದ ಇನ್​ಸ್ಟಾಗ್ರಾಂ ಈಗಾಗಲೇ ಟಿಕ್​ಟಾಕ್​ ವಿರುದ್ಧದ ಪೈಪೋಟಿಗೆ ಸಜ್ಜಾಗುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡಲು ಇಷ್ಟಪಡುವವರಿಗೆ ಮೆಟಾ ಹೊಸ ಗುಡ್​ ನ್ಯೂಸ್​ ನೀಡಿದೆ. ಅದೇನೆಂದರೆ ಇನ್ಮುಂದೆ 90 ಸೆಕೆಂಡುಗಳವರೆಗೆ ನೀವು ರೀಲ್ಸ್​ ಮಾಡಬಹುದಾಗಿದೆ.

ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂಗಳೆರಡರಲ್ಲಿಯೂ ಮೆಟಾ ಕಂಪನಿಯು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಲೇ ಇದೆ. ರೀಲ್ಸ್​ನಲ್ಲಿರುವ ಸೌಂಡ್​ ಸಿಂಕ್​ ವೈಶಿಷ್ಟ್ಯವು ಅತ್ಯಂತ ಆಸಕ್ತಿದಾಯಕವಾಗಿದೆ.
ಸೌಂಡ್​ ಸಿಂಕ್​ ವೈಶಿಷ್ಟ್ಯದ ಮೂಲಕ ವಿಡಿಯೋ ಕ್ಲಿಪ್​ಗಳನ್ನು ನೆಚ್ಚಿನ ಹಾಡಿನ ಬೀಟ್​ಗೆ ಸ್ವಯಂಚಾಲಿತವಾಗಿ ಸಿಂಕ್​ ಮಾಡಬಹುದಾಗಿದೆ.

ಇದು ಟಿಕ್​ಟಾಕ್​ಗೆ ಠಕ್ಕರ್​ ನೀಡಲು ತಂದ ವೈಶಿಷ್ಟ್ಯವೆಂದೇ ಹೇಳಲಾಗುತ್ತಿದೆ. ಏಕೆಂದರೆ ಟಿಕ್​ಟಾಕ್​ನಲ್ಲಿ ಮೂರು ನಿಮಿಷಗಳಿಂದ ಹಿಡಿದು 10 ನಿಮಿಷಗಳವರೆಗೆ ವಿಡಿಯೋವನ್ನು ಮಾಡಬಹುದಾಗಿದೆ. ರೀಲ್ಸ್​ ಹಾಗೂ ಇನ್​ಸ್ಟಾಗ್ರಾಂ ಮೂಲಕ ಹಣ ಗಳಿಸುತ್ತಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟಾ ಇಂತಹ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.

ಇಂದು ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ರೀಲ್​​ಗಳ ಮೂಲಕ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರಲು ಆರಂಭಿಸುತ್ತದೆ. ಇದರಿಂದ ಇನ್ನಷ್ಟು ಪ್ರೇಕ್ಷಕರನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ಬ್ಲಾಗ್​ ಪೋಸ್ಟ್​ನಲ್ಲಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...