
ಸ್ಟೋರಿ ಫೀಡ್‌ಗಳ ಮೂಲಕ ಇನ್ನು ಮುಂದೆ 60 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಲು ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಅನುಮತಿ ನೀಡಿದೆ.
ಈ ಬದಲಾವಣೆ ಕುರಿತಂತೆ ಇನ್‌ಸ್ಟಾಗ್ರಾಂ ತನ್ನ ಬಳಕೆದಾರರ ಗಮನಕ್ಕೆ ತಂದಿದೆ.
ಸದ್ಯದ ಮಟ್ಟಿಗೆ, ಇನ್‌ಸ್ಟಾಗ್ರಾಂನಲ್ಲಿ 15 ಸೆಕೆಂಡ್‌ಗಳಿಗಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ಬಳಕೆದಾರರು ಅಪ್ಲೋಡ್ ಮಾಡಿದರೆ ಅದು ಭಾಗಗಳಾಗಿ ಪೋಸ್ಟ್ ಆಗುತ್ತದೆ.
ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ
ಆದರೆ ಇದೀಗ 60 ಸೆಕೆಂಡ್‌ಗಳವರೆಗಿನ ವಿಡಿಯೋಗಳನ್ನು ಭಾಗ ಮಾಡದೇ ಪೋಸ್ಟ್ ಮಾಡಬಹುದಾಗಿದೆ.
ಫೇಸ್ಬುಕ್‌ನ ಹೆಸರು ಮೆಟಾ ಆಗಿ ಅಕ್ಟೋಬರ್‌ನಲ್ಲಿ ಬದಲಾದ ವಾರದ ಒಳಗೆ ಇನ್‌ಸ್ಟಾಗ್ರಾಂ ತನ್ನ ಒಟ್ಟಾರೆ ಬಳಕೆದಾರರ ಬಳಗವು ಎರಡು ಶತಕೋಟಿ ದಾಟಿರುವುದನ್ನು ಕಂಡಿದೆ. ಜೂನ್ 2018ರಲ್ಲಿ ತನ್ನ ಬಳಕೆದಾರರ ಸಂಖ್ಯೆ ಶತಕೋಟಿ ದಾಟಿದ ಬಳಿಕ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಬಹಿರಂಗವಾಗಿ ತೋರುವ ಪರಿಪಾಠಕ್ಕೆ ಇನ್‌ಸ್ಟಾಗ್ರಾಂ ಮುಂದಾಗಿದೆ.