ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡದೆ ಹೋದರೆ ದೇಹದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಯಾವುವು ಎಂದಿರಾ…?
ಸರಿಯಾಗಿ ನಿದ್ದೆ ಮಾಡದೆ ಇರುವುದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೃದಯಾಘಾತದ ಲಕ್ಷಣಗಳನ್ನು ಜಾಸ್ತಿ ಮಾಡುತ್ತದೆ. ಪಾರ್ಶ್ವವಾಯುವಿನಂಥ ಅಪಾಯವನ್ನೂ ತಂದೊಡ್ಡುತ್ತವೆ.
ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಮಹಿಳೆಯರಿಗೆ ತಿಂಗಳ ರಜೆಯ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವ ಹಾಗೂ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಜೀರ್ಣ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗಬಹುದು.
ಸರಿಯಾಗಿ ನಿದ್ದೆ ಮಾಡಿದರೆ ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಹಾರ್ಮೋನ್ ಗಳು ಸಮತೋಲನದಲ್ಲಿರುತ್ತವೆ. ಆಯಾಸ ದೂರವಾಗುತ್ತದೆ. ಫ್ರೆಶ್ ಆದ ದಿನವನ್ನು ಆರಂಭಿಸಲು ಸಾಧ್ಯವಾಗುತ್ತದೆ.
ತೂಕ ಇಳಿಕೆಗೂ ನಿದ್ದೆಗೂ ನೇರವಾದ ಸಂಬಂಧವಿದೆ. ಸರಿಯಾಗಿ ನಿದ್ದೆ ಮಾಡದೆ ಹೋದಲ್ಲಿ ದೇಹ ತೂಕ ವಿಪರೀತ ಹೆಚ್ಚಬಹುದು. ಇದರಿಂದ ಮಧುಮೇಹ ಸಮಸ್ಯೆಯೂ ಉಲ್ಬಣಗೊಳ್ಳಬಹುದು. ಹಾಗಾಗಿ ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡಿ.