ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾತೆದಾರರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜೂನ್ 1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಇಪಿಎಫ್ಒನ ಹೊಸ ನಿಯಮಗಳ ಪ್ರಕಾರ, ಎಲ್ಲಾ ಇಪಿಎಫ್ಒ ಖಾತೆದಾರರು ತಮ್ಮ ಯುಎಎನ್ ಸಂಖ್ಯೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಅನಿವಾರ್ಯವಾಗಿದೆ.
ಆಧಾರ್ನೊಂದಿಗೆ ತಮ್ಮ ಪಿಎಫ್ ಖಾತೆಯನ್ನು ಪರಿಶೀಲಿಸುವಂತೆ ತನ್ನ ಉದ್ಯೋಗಿಗಳನ್ನು ಕೇಳಿಕೊಳ್ಳುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ. ಯುಎಎನ್ ಸಂಖ್ಯೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಪಿಎಫ್ ಹಣ ಹಿಂಪಡೆಯಲು ಸಾಧ್ಯವಿಲ್ಲ.
ಇಪಿಎಫ್ಒ ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಯುಎಎನ್ ಲಿಂಕ್ ಮಾಡದೆ ಹೋದಲ್ಲಿ ಇಸಿಆರ್-ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಭರ್ತಿ ಮಾಡಲಾಗುವುದಿಲ್ಲ ಎಂದು ಇಪಿಎಫ್ಒ, ಉದ್ಯೋಗದಾತರಿಗೆ ಸ್ಪಷ್ಟವಾಗಿ ಸೂಚಿಸಿದೆ.
ಮೊದಲು ಇಪಿಎಫ್ಒ ವೆಬ್ಸೈಟ್ www.epfindia.gov.in ಗೆ ಲಾಗ್ ಇನ್ ಆಗಬೇಕು. ಇದರ ನಂತರ, ಆನ್ಲೈನ್ ಸೇವೆಗಳಿಗೆ ಹೋಗುವ ಮೂಲಕ ಇ-ಕೆವೈಸಿ ಪೋರ್ಟಲ್ ಕ್ಲಿಕ್ ಮಾಡಬೇಕು. ನಂತರ ಯುಎಎನ್ ಆಧಾರ್ ಅನ್ನು ಲಿಂಕ್ ಮಾಡಬೇಕು. ಯುಎಎನ್ ಖಾತೆಯಲ್ಲಿ ನೋಂದಾಯಿಸಲಾದ ಯುಎಎನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಲೋಡ್ ಮಾಡಬೇಕು. ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದನ್ನು ನಮೂದಿಸಿ ಸಲ್ಲಿಸಬೇಕು. ನಂತ್ರ ಆಧಾರ್ ವಿವರಗಳನ್ನು ತುಂಬಿ ಪರಿಶೀಲಿಸಬೇಕು. ಪರಿಶೀಲನೆಯ ನಂತರ ಆಧಾರನ್ನು ಪಿಎಫ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ.