ಬೆಂಗಳೂರು: ಸಾಹಿತಿ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮಾಧ್ಯಮ ಪ್ರಕಟಣೆ ನೀಡಿದ್ದು, ಇದು ದುದಾದೃಷ್ಟಕರ ಘಟನೆ. ತಾತ್ವಿಕ ಭಿನ್ನಾಭಿಪ್ರಾಯಗಳು ದೈಹಿಕ ಹಲ್ಲೆ, ದೈಹಿಕ ಹಿಂಸೆ ರೂಪ ತಾಳಬಾರದು. ಇಂತಹ ಕೃತ್ಯಗಳನ್ನು ಖಂಡಿಸುತ್ತೇನೆ. ಮಸಿ ಬಳಿಯುವುದು ಕನ್ನಡದ ಸಂಸ್ಕೃತಿಯಲ್ಲ ಎಂದು ತಿಳಿಸಿದ್ದಾರೆ.