ಕೆಜಿಎಫ್: ಕಳ್ಳನ ಹಿಡಿಯಲು ಹೋದಾಗ ದಾಳಿಮಾಡಿ ಎಸ್ಐ ಕೈ ತುಂಡರಿಸಿದ ಘಟನೆ ಕೆಜಿಎಫ್ ನ ಆಂಡರ್ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೂರ್ದು ನಗರದಲ್ಲಿ ನಡೆದಿದೆ.
ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹರಿನಾಥ ಬಾಬು ಅವರ ಮೇಲೆ ಕಳವು ಆರೋಪಿ ಅಪ್ಟೆನ್(28) ಲಾಂಗ್ ನಿಂದ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರಿನಾಥ ಬಾಬು ಅವರಿಗೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪ್ಟೆನ್ ಕಳವು ಪ್ರಕರಣದ ಆರೋಪಿಯಾಗಿದ್ದು ಈತ ಕೆಜಿಎಫ್ ನ ಲೂರ್ದು ನಗರದಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಹರಿನಾಥ ಬಾಬು ಮೂವರು ಪೊಲೀಸರೊಂದಿಗೆ ಬುಧವಾರ ರಾತ್ರಿ ಆತನ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅ್ಟೆನ್ ಲಾಂಗ್ ನಿಂದ ದಾಳಿ ಮಾಡಿದ್ದು, ಅಡ್ಡ ಹಿಡಿದ ಎಸ್ಐ ಹರಿನಾಥ ಬಾಬು ಅವರ ಕೈ ತುಂಡರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.