ಬೆಂಗಳೂರು: ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ನಿಯಂತ್ರಿಸುವಾಗ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಕಾಲು ಮುರಿದುಕೊಂಡ ಘಟನೆ ನಡೆದಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಪುನೀತ್ ರಾಜಕುಮಾರ್ ಅಂತಿಮದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಅಭಿಮಾನಿಗಳನ್ನು ತಡೆಯುವ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಗಣೇಶ್ ನಾಯಕ್ ಅವರು ಕಾಲು ಮುರಿತವಾಗಿದೆ. ಮಡಿವಾಳ ಕಾನ್ಸ್ ಟೇಬಲ್ ಆಗಿರುವ ಗಣೇಶ್ ನಾಯಕ್ ಕಂಠೀರವ ಸ್ಟೇಡಿಯಂ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವಘಡ ಉಂಟಾಗಿದ್ದು, ಅವರನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.