
ಕಾರವಾರ: ಮೊಮ್ಮಗು ನೋಡಲು ಆಸ್ಪತ್ರೆಗೆ ಬಂದಿದ್ದ ಅತ್ತೆಗೆ ಅಳಿಯನೇ ಚಾಕುವಿನಿಂದ ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕದ್ರಾದದ ಮೊಹಮ್ಮದಾಬೀ ಗಾಯಗೊಂಡ ಮಹಿಳೆ. ಅವರ ಪುತ್ರಿಯ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ಅಳಿಯ ದಾಂಡೇಲಿಯ ರಮಜಾನ್ ಚಾಕುವಿನಿಂದ ಇರಿದಿದ್ದಾನೆ. ನೀನೇಕೆ ನನ್ನ ಮಗನನ್ನು ನೋಡಲು ಬಂದಿರುವೆ ಎಂದು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿರುವ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.