ಬೆಂಗಳೂರು : ಬೆಂಗಳೂರಲ್ಲಿ ಮನಕಲುಕುವ ಘಟನೆ ನಡೆದಿದ್ದು, ಸ್ವಂತ ತಾಯಿಯನ್ನೇ ಮಗಳು ಕಳ್ಳರಂತೆ ನಡುರಾತ್ರಿ ಕಾರಿನಲ್ಲಿ ತಂದು ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ನಿಜಕ್ಕೂ ಬಹಳ ಅಮಾನವೀಯ ಘಟನೆಯಾಗಿದ್ದು, ಹೆತ್ತು ಹೊತ್ತು ಸಾಕಿದ 80 ವರ್ಷದ ವೃದ್ದೆ ತಾಯಿಯನ್ನೇ ಮಗಳು ಬೀದಿಪಾಲು ಮಾಡಿದ್ದಾಳೆ.
ಬೆಂಗಳೂರಿನ ಅನೇಕಲ್ ನ ವಿ ಕಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಳಿಯ ಮಂಜುನಾಥ್, ಮಗಳು ಆಶಾರಾಣಿ ಎಂಬುವವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪಾಪಿ ಮಗಳು ಹಾಗೂ ಅಳಿಯನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಕಾರಿನಲ್ಲಿ ಅಮ್ಮನನ್ನು ಕರೆದುಕೊಂಡ ಬಂದ ಮಗಳು ಯಾರೂ ಇಲ್ಲದ ಪ್ರದೇಶದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ರಾತ್ರಿಯಿಡೀ ವೃದ್ದೆ ರಸ್ತೆಯಲ್ಲಿ ಕಾಲ ಕಳೆದಿದ್ದಾಳೆ. ಬೆಳಗ್ಗೆ ನೋಡಿದ ಸ್ಥಳೀಯರು 80 ವರ್ಷದ ವೃದ್ದೆಯನ್ನು ರಕ್ಷಣೆ ಮಾಡಿ ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ವೃದ್ದೆಯನ್ನು ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟುಹೋದ ಇಂತಹ ಮಕ್ಕಳು ಯಾರಿಗೂ ಹುಟ್ಟಬಾರದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.